Bengaluru 24°C

ಅತ್ಯಾಚಾರ ಎಸಗಲು ಬಂದ ಕಾಮುಕನನ್ನು ತಿವಿದು ಬಿಸಾಕಿದ ಹಸು : ವಿಡಿಯೋ ವೈರಲ್

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತೀ ದಿನ ಒಂದಲ್ಲಾ ಒಂದು ಅತ್ಯಾಚಾರ ನಡೆಯುತ್ತಲೇ ಇದೆ.  ಮಹಿಳೆಯರು, ವೃದ್ಧೆಯರು, ಹಸುಗೂಸು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಸಹ ಅತ್ಯಾಚಾರ ಎಸಗುತ್ತಿದ್ದಾರೆ. ಹಸುವಿನ ಮೇಲೆ ಅತ್ಯಾಚಾರ ಎಸಗಿದ, ಶ್ವಾನದ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ.

ಅತ್ಯಾಚಾರ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ದಿನೇ ದಿನೇ ಹೆಚ್ಚುತ್ತಲೇ ಇದೆ. ಪ್ರತೀ ದಿನ ಒಂದಲ್ಲಾ ಒಂದು ಅತ್ಯಾಚಾರ ನಡೆಯುತ್ತಲೇ ಇದೆ.  ಮಹಿಳೆಯರು, ವೃದ್ಧೆಯರು, ಹಸುಗೂಸು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಸಹ ಅತ್ಯಾಚಾರ ಎಸಗುತ್ತಿದ್ದಾರೆ. ಹಸುವಿನ ಮೇಲೆ ಅತ್ಯಾಚಾರ ಎಸಗಿದ, ಶ್ವಾನದ ಮೇಲೆ ಅತ್ಯಾಚಾರ ಎಸಗಿದ ಹೀನ ಕೃತ್ಯದ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಲೇ ಇವೆ. ಇದೀಗ ಇಲ್ಲೊಬ್ಬ ಕಾಮಾಂಧ ಕುಡಿದ ಮತ್ತಿನಲ್ಲಿ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದು, ಕೋಪಗೊಂಡ ಹಸು ಆತನನ್ನು ಕೊಂಬಿನಿಂದ ತಿವಿದು ಎತ್ತಿ ಬಿಸಾಕಿದೆ. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಮಾಡಿದ ತಪ್ಪಿಗೆ ಆತನಿಗೆ ತಕ್ಕ ಶಾಸ್ತಿಯಾಗಿದೆ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ.


ಈ ಅಘಾತಕಾರಿ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದ್ದು, ಇಲ್ಲಿಗೆ ಪ್ರವಾಸ ಬಂದಿದ್ದ ರಷ್ಯಾದ 26 ವರ್ಷದ ಕುವ್ಶಿನೋವ್ ಎಂಬಾತ ಕುಡಿದ ಮತ್ತಿನಲ್ಲಿ ಸಂಪೂರ್ಣ ಬೆತ್ತಲಾಗಿ ಹಸುವಿನ ಮೇಲೆ ಅತ್ಯಾಚಾರ ಎಸಗಲು ಮುಂದಾಗಿದ್ದಾನೆ. ಹೀಗೆ ಅತ್ಯಾಚಾರ ಎಸಗಲು ಹೋದ ಸಂದರ್ಭದಲ್ಲಿ ಕೋಪಗೊಂಡ ಹಸು ಈ ಕಾಮಾಂಧನ ಮೇಲೆ ಕೊಂಬಿನಿಂದ ಸರಿಯಾಗಿ ದಾಳಿ ನಡೆಸಿದೆ. ಕೊನೆಗೆ ಪೊಲೀಸರು ಸ್ಥಳಕ್ಕಾಗಮಿಸಿ ಆತನನ್ನು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆತನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.


 

Nk Channel Final 21 09 2023