Bengaluru 22°C
Ad

ಮನೆಗೆ ಕನ್ನ ಹಾಕಲೆಂದು ಬಂದು ಎಸಿ ಆನ್‌ಮಾಡಿ ಗಾಡ ನಿದ್ರೆಗೆ ಜಾರಿದ ಖದೀಮ

ನಗರದ ಮನೆವೋಂದರಲ್ಲಿ ವಿಚಿತ್ರ ಘಟನೆ ನಡೆದಿದ್ದು ಈ ಘಟನೆ ಕುರಿತು ನಗುವುದೋ ಅಳುವುದೋ ತಿಳಿಯದಂತಾಗಿದೆ. ಕಳ್ಳತನ ಮಾಡಲು ಮನೆಗೆ ನುಗ್ಗಿದ ಖದೀಮನೊಬ್ಬ ಎಸಿ ಆನ್ ಮಾಡಿಕೊಂಡು ನಿದ್ದೆಗೆ ಜಾರಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಈ ಘಟನೆಯು ಉತ್ತರಪ್ರದೇಶದ ಲಕ್ನೋದ ಇಂದಿರಾನಗರದಲ್ಲಿ ನಡೆದಿದೆ.

ಲಕ್ನೋ: ನಗರದ ಮನೆವೋಂದರಲ್ಲಿ ವಿಚಿತ್ರ ಘಟನೆ ನಡೆದಿದ್ದು ಈ ಘಟನೆ ಕುರಿತು ನಗುವುದೋ ಅಳುವುದೋ ತಿಳಿಯದಂತಾಗಿದೆ. ಕಳ್ಳತನ ಮಾಡಲು ಮನೆಗೆ ನುಗ್ಗಿದ ಖದೀಮನೊಬ್ಬ ಎಸಿ ಆನ್ ಮಾಡಿಕೊಂಡು ನಿದ್ದೆಗೆ ಜಾರಿ ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದಾನೆ. ಈ ಘಟನೆಯು ಉತ್ತರಪ್ರದೇಶದ ಲಕ್ನೋದ ಇಂದಿರಾನಗರದಲ್ಲಿ ನಡೆದಿದೆ.

ಇಂದಿರಾನಗರದಲ್ಲಿರುವ ಡಾಕ್ಟರ್ ಸುನೀಲ್ ಪಾಂಡೆ ಎಂಬುವರ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳ ಮನೆಗೆ ನುಗ್ಗಿದ್ದಾನೆ. ದೊಡ್ಡ ಮಟ್ಟದಲ್ಲಿ ಆ ಮನೆಯಲ್ಲಿ ಕದಿಯಬೇಕು ಎಂದುಕೊಂಡಿದ್ದನು. ಹೀಗೆ ದೋಚಲು ಡ್ರಾಯಿಂಗ್‌ ರೂಮ್‌ಗೆ ತರಳಿದ ಖದೀಮ ಎಸಿ ಆನ್‌ ಮಾಡಿದ್ದಾನೆ. ಬಳಿಕ ತಂಪಾದ ಗಾಳಿಗೆ ನಿದ್ರೆಬರಲು ಶುರುವಾಗಿದೆ ನಂತರ ಶರ್ಟ್‌ ತೆಗೆದು ತಲೆಗೆ ಇಟ್ಟುಕೊಂಡು ಅಲ್ಲೆ ಗಾಡ ನಿದ್ರೆಗೆ ಜಾರಿದ್ದಾನೆ.

ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯೊಳಗೆ ಹೋಗಿ ನೋಡಿದ್ದಾರೆ. ಯಾವುದೇ ಚಿಂತೆ, ಭಯಯಿಲ್ಲದೆ ಕಳ್ಳ ನಿದ್ದೆ ಮಾಡುತ್ತಿದ್ದನು. ಪೊಲೀಸರು ಕಳ್ಳನನ್ನ ಎಬ್ಬಿಸಿ ಅರೆಸ್ಟ್ ಮಾಡಿ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಜಾಸ್ತಿ ಮದ್ಯಪಾನ ಮಾಡಿದ್ದರಿಂದ ಎಸಿ ಹಾಕಿದ್ದಕ್ಕೆ ನಿದ್ದೆ ಬಂದು ಮಲಗಿದ್ದನು ಎಂದು ಪೊಲೀಸರು ಹೇಳಿದ್ದಾರೆ ಎನ್ನಲಾಗಿದೆ.

Ad
Ad
Nk Channel Final 21 09 2023
Ad