Ad

ಚಲಿಸುತ್ತಿದ್ದ ಬಸ್​ನಿಂದ ಕೆಳಗೆ ಬಿದ್ದ ಮಹಿಳೆ; ಭಯಾನಕ ವಿಡಿಯೋ ವೈರಲ್

Bus (1)

ತಮಿಳುನಾಡು: ತಮಿಳುನಾಡಿನ ನಾಮಕ್ಕಲ್​ನಲ್ಲಿಭಯಾನಕ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್​ನಿಂದ ಕೆಳಗೆ ಬಿದ್ದಿದ್ದಾರೆ. ಆ ಸಮಯದಲ್ಲಿ ಬಸ್​ನ ವೇಗವೂ ಹೆಚ್ಚಿತ್ತು, ಈ ದೃಶ್ಯ ಖಾಸಗಿ ಬಸ್​ನಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಹಿಳೆಗೆ ಗಂಭೀರ ಗಾಯಗಳಾಗಿವೆ.

Ad
300x250 2

ಶಾರದಾ ಎಂಬ ಮಹಿಳೆ ಬಟ್ಟೆ ಖರೀದಿಸಲು ಜೇಡರಪಾಳ್ಯಂನಿಂದ ಸೇಲಂಗೆ ತೆರಳಿದ್ದು, ಖಾಸಗಿ ಬಸ್​ನಲ್ಲಿ ಮನೆಗೆ ಮರಳುತ್ತಿದ್ದರು. ಆಕೆ ಬಸ್​ನಿಂದ ಸುಮಾರು 20 ಅಡಿ ದೂರದಲ್ಲಿ ಬಿದ್ದಿದ್ದಾರೆ, ಗಾಬರಿಗೊಂಡ ಪ್ರಯಾಣಿಕರು ಕಂಡಕ್ಟರ್​ಗೆ ಮಾಹಿತಿ ನೀಡಿ ಬಸ್​ ನಿಲ್ಲಿಸಿದ್ದಾರೆ. ಪ್ರಯಾಣಿಕರು ಶಾರದಾಗೆ ಸಹಾಯ ಮಾಡಿದರು. ಚಿಕಿತ್ಸೆಗಾಗಿ ಸೇಲಂನ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಗಂಭೀರವಾಗಿ ಗಾಯಗೊಂಡಿದ್ದರೂ ಜೀವಕ್ಕೆ ಅಪಾಯವಿಲ್ಲ ಎಂಬುದು ತಿಳಿದುಬಂದಿದೆ. ಈ ವಿಡಿಯೋದಲ್ಲಿ ಹಲವು ಮಹಿಳೆಯರು ನಿಂತು ಪ್ರಯಾಣಿಸುತ್ತಿರುವುದು ಕಂಡು ಬಂದಿದೆ.

Ad
Ad
Nk Channel Final 21 09 2023
Ad