ನೋಯ್ಡಾ: ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬ ಗ್ರಾಹಕರಿಗೆ ಫುಡ್ ಪಾರ್ಸೆಲ್ ಕೊಟ್ಟು ಬರುವಾಗ ಅಲ್ಲೇ ಇನ್ನೊಂದು ಮನೆಯ ಮುಂದಿದ್ದ ಒಂದು ಜೋಡಿ ಶೂಗಳನ್ನು ಎಗರಿಸಿಕೊಂಡು ಹೋಗಿದ್ದಾನೆ. ಈ ದೃಶ್ಯ ಮನೆಯ ಮುಂಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲ ತಿಂಗಳುಗಳ ಹಿಂದೆ ಗುರುಗ್ರಾಮ್‌ನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್ ಪಾರ್ಸೆಲ್ ಕೊಡಲು ಬಂದು ಮನೆಯ ಹೊರಗಿದ್ದ ಒಂದು ಜೋಡಿ ದುಬಾರಿ ಶೂವನ್ನು ಕಳ್ಳತನ ಮಾಡಿದ್ದ ಪ್ರಸಂಗವೊಂದು ನಡೆದಿತ್ತು. ಇದೀಗ ಅಂತಹದ್ದೇ ಘಟನೆ ಮತ್ತೊಮ್ಮೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದ್ದು, ಅಪಾರ್ಟ್‌ಮೆಂಟ್ ಒಂದಕ್ಕೆ ಫುಡ್ ಡೆಲಿವರಿ ಮಾಡಲು ಬಂದ ಸ್ವಿಗ್ಗಿ ಡೆಲಿವರಿ ಬಾಯ್ ಯಾರೋ ಮನೆಯ ಹೊರ ಭಾಗದಲ್ಲಿ ಶೂ ರ್ಯಾಕ್‌ನಲ್ಲಿ ಇಟ್ಟಿದ್ದಂತ ಒಂದು ಜೋಡಿ ಶೂ ಅನ್ನು ಕದ್ದುಕೊಂಡು ಹೋಗಿದ್ದಾನೆ. ಈ ದೃಶ್ಯ ಅಲ್ಲೇ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಬಗ್ಗೆ ಮನೆಯವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಇದೀಗ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈ ಕುರಿತ ವಿಡಿಯೋವನ್ನು ಸಚಿನ್ ಗುಪ್ತಾ (SachinGuptaUP) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಫ್ಲಾಟ್‌ನ ಹೊರಗೆ ಇಟ್ಟಿದ್ದ ಶೂಗಳನ್ನು ಕಳ್ಳತನ ಮಾಡಿದ ಡೆಲಿವರಿ ಬಾಯ್” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
फ्लैट के बाहर रखे जूते चोरी। Swiggy डिलीवरी बॉय की भी कोई मजबूरी रही होगी…
📍नोएडा, उत्तर प्रदेश pic.twitter.com/bUTkC7nPeA
— Sachin Gupta (@SachinGuptaUP) September 17, 2024