Bengaluru 29°C
Ad

ಬಾಹ್ಯಾಕಾಶ ಕೇಂದ್ರದಿಂದ ಸುನಿತಾ ವಿಲಿಯಮ್ಸ್ ಸುದ್ದಿಗೋಷ್ಟಿ!

ಸುನಿತಾ ವಿಲಿಯಮ್ಸ್​ ಮತ್ತು ಬೂಚ್​ ವಿಲ್ಮೋರ್​ ಭೂಮಿಯಿಂದ 420 ಕಿಲೋ ಮೀಟರ್ ದೂರದಲ್ಲಿರುವ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ.

ಸುನಿತಾ ವಿಲಿಯಮ್ಸ್​ ಮತ್ತು ಬೂಚ್​ ವಿಲ್ಮೋರ್​ ಭೂಮಿಯಿಂದ 420 ಕಿಲೋ ಮೀಟರ್ ದೂರದಲ್ಲಿರುವ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ತಾಂತ್ರಿಕ ಸಮಸ್ಯೆಯಿಂದಾಗಿ ಭೂಮಿಗೆ ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಗಗನಯಾನಿಗಳು ಬಾಹ್ಯಾಕಾಶದಿಂದಲೇ ಸುದ್ದಿಗೋಷ್ಟಿ ನಡೆಸಿ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದರು.

ಬೋಯಿಂಗ್ ವಿಮಾನ ಟೇಕ್ ಆಫ್ ಆಗುವುದು ಮತ್ತು ಕಕ್ಷೆಯಲ್ಲಿ ಹಲವಾರು ತಿಂಗಳು ಕಳೆಯುವುದು ಕಷ್ಟಕರವಾಗಿದೆ. ಆದರೆ ನಾವು ಬಾಹ್ಯಾಕಾಶದಲ್ಲಿ ಕಳೆಯಲು ಇಷ್ಟಪಡ್ತೇವೆ. ಇದು ನಮ್ಮ ನೆಚ್ಚಿನ ಸ್ಥಳಗಳಲ್ಲಿ ಒಂದಾಗಿದೆ ಎಂದಿದ್ದಾರೆ. ಇದು ನನಗೆ ಖುಷಿ ನೀಡುವ ಸ್ಥಳ. ನಾನು ಬಾಹ್ಯಾಕಾಶದಲ್ಲಿ ಇರಲು ಇಷ್ಟ ಪಡ್ತೇನೆ. ನಾನು ನನ್ನ ತಾಯಿ ಜೊತೆಗಿನ ಅಮೂಲ್ಯ ಸಮಯವನ್ನು ಕಳೆದುಕೊಂಡಿದ್ದೇನೆ.

ಈ ನೋವು ಇದೆ. ನಾವು ಪರೀಕ್ಷಕರು, ಅದು ನಮ್ಮ ಕೆಲಸ. ನಾವು ಸಮಸ್ಯೆಗಳನ್ನು ಎದುರಿಸಿ, ಸ್ಟಾರ್​ಲೈನರ್ ಮೂಲಕ ಸುರಕ್ಷಿತವಾಗಿ ಮರಳಿ ಇಳಿಯಲು ಬಯಸಿದ್ದೇವೆ. ನೀವು ಪುಟಗಳನ್ನು ತಿರುಗಿಸಬೇಕು, ಮುಂದಿನ ಅವಕಾಶಕ್ಕಾಗಿ ನಾವು ನೋಡಬೇಕು. ಬಾಹ್ಯಾಕಾಶ ಜೀವನಕ್ಕೆ ಒಗ್ಗಿಕೊಳ್ಳುವುದು ಕಷ್ಟವಾಗಿರಲಿಲ್ಲ. ನಾವಿಬ್ಬರು ಮೊದಲು ಕೂಡ ಇಲ್ಲಿಗೆ ಬಂದಿದ್ದೇವು. ಕೆಲ ವರ್ಷಗಳ ಹಿಂದೆ ಬಾಹ್ಯಾಕಾಶ ನಿಲ್ದಾಣದಲ್ಲಿ ಎರಡು ದೀರ್ಘಾವಧಿಯಲ್ಲಿ ತಂಗಿದ್ದೇವು ಎಂದಿದ್ದಾರೆ.

ಬಾಹ್ಯಾಕಾಶ ನೌಕೆಯ ಪೈಲಟ್ ಆಗಿ ಇಡೀ ಮಾರ್ಗದಲ್ಲಿ ಕೆಲವು ಕಠಿಣ ಸಮಯಗಳಿವೆ. ನೀವು ಇದನ್ನು ನೋಡಲು ಬಯಸುವುದಿಲ್ಲ. ಸ್ಟಾರ್​ಲೈನರ್ ಮೊದಲ ಪರೀಕ್ಷಾ ಪೈಲಟ್ ಆಗಿ ಸುಮಾರು ಒಂದು ವರ್ಷ ಅಲ್ಲಿ ಉಳಿಯಲು ನಿರೀಕ್ಷಿಸರಲಿಲ್ಲ. ಹಿಂತಿರಗಲು ಸಮಸ್ಯೆಗಳಿಂದ ವಿಳಂಬವಾಗಿದೆ ಎಂದರು.

ಇದೇ ವೇಳೆ ವಿಲ್ಮೋರ್ ತಮ್ಮ ಕಿರಿಯ ಮಗಳ ಪ್ರೌಢಶಾಲೆಯ ಅಂತಿಮ ವರ್ಷಕ್ಕೆ ಹಾಜರಾಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವಿಲ್ಮೋರ್ ಮತ್ತು ವಿಲಿಯಮ್ಸ್​ ಬಾಹ್ಯಾಕಾಶ ನಿಲ್ದಾಣದ ಸದಸ್ಯರಾಗಿದ್ದಾರೆ. ದಿನ ನಿತ್ಯದ ನಿರ್ವಹಣೆ ಮತ್ತು ಪ್ರಯೋಗಗಳನ್ನು ನಿರ್ವಹಿಸುತ್ತಿದ್ದಾರೆ. ಕೆಲವೇ ವಾರಗಳಲ್ಲಿ ವಿಲಿಯಮ್ಸ್ ಬಾಹ್ಯಾಕಾಶ ನಿಲ್ದಾಣದ ಕಮಾಂಡ್ ತೆಗೆದುಕೊಳ್ಳುತ್ತಾರೆ ಎಂದು ವಿಲ್ಮೋರ್​​ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

 

Ad
Ad
Nk Channel Final 21 09 2023