Ad

ಕ್ಲಾಸ್‌ರೂಮ್‌ನಲ್ಲೇ ವಿದ್ಯಾರ್ಥಿಗಳ ಕಿಸ್ಸಿಂಗ್‌: ವೀಡಿಯೋ ವೈರಲ್

Students

ನೋಯ್ಡಾ: ಇಲ್ಲಿನ ಖಾಸಗಿ ಶಾಲೆಯೊಂದರ ತರಗತಿಯೊಂದರಲ್ಲಿ ವಿದ್ಯಾರ್ಥಿಗಳು ಪರಸ್ಪರ ಕಿಸ್ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಕ್ಕಳ ಈ ದಾರಿ ತಪ್ಪಿದ ವರ್ತನೆಗೆ ತೀವ್ರ ಆಕ್ರೋಶ ಕೇಳಿ ಬಂದಿದೆ.

ಟ್ವಿಟ್ಟರ್‌ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಶಾಲೆಯ ಸಮವಸ್ತ್ರ ಧರಿಸಿದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ತರತಿಯ ಕೊನೆಬೆಂಚ್‌ನಲ್ಲಿ ಕುಳಿತು ಪರಸ್ಪರ ಕಿಸ್ ಮಾಡುತ್ತಿದ್ದರೆ, ಅವರ ಪಕ್ಕದಲ್ಲೇ ಇತರ ಮಕ್ಕಳು ಇದ್ದರೂ ಕೂಡ ಕ್ಯಾರೇ ಎನ್ನದೇ ಈ ವಿದ್ಯಾರ್ಥಿಗಳು ಕಿಸ್ಸಿಂಗ್‌ನಲ್ಲಿ ತೊಡಗಿದ್ದು, ವೀಡಿಯೋದಲ್ಲಿ ಕಂಡು ಬರುತ್ತಿದೆ.

ಆದರೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹೇಳುವ ಪ್ರಕಾರ ಇದು ಹಳೆ ವೀಡಿಯೋ ಹಲವು ವರ್ಷಗಳ ಹಳೇ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದೇ ಕಾರಣಕ್ಕೆ ಸಾಮಾಜಿಕ ಜಾಲತಾಣವನ್ನು ಪರಿಶೀಲಿಸಿ ನಂಬಬೇಕು ಎಂದು ಒಬ್ಬರು ಈ ವೀಡಿಯೋಗೆ ಕಾಮೆಂಟ್ ಮಾಡಿದ್ದಾರೆ.

 

Ad
Ad
Nk Channel Final 21 09 2023