ವೈರಲ್: ಕೆಲಸದ ಸ್ಥಳಗಳಲ್ಲಿ ಕಂಪೆನಿಗಳು ಕೆಲವೊಂದು ಕಟ್ಟುನಿಟ್ಟಾದ ಕ್ರಮಗಳು, ನಿಯಮಗಳನ್ನು ಪಾಲಿಸುತ್ತವೆ. ಒಂದು ವೇಲೆ ನೌಕರರು ಪಾಲಿಸಿಲ್ಲ ಅಂದ್ರೆ ಬೈಗುಳ ಗ್ಯಾರಂಟಿ.
ಆದ್ರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಕೆಲಸದ ಸಮಯದಲ್ಲಿ ಲಿಂಕ್ಡ್ ಇನ್ ಪೋಸ್ಟ್ ಒಂದನ್ನು ಲೈಕ್ ಮಾಡಿದ್ದಾರೆ ಎಂಬ ಒಂದೇ ಒಂದು ಕಾರಣಕ್ಕೆ ಮೆಂಟಲ್ ಹೆಲ್ತ್ ಸ್ಟಾರ್ಟ್‌ಅಪ್ ಕಂಪೆನಿಯೊಂದು ಮಹಿಳೆಯೊಬ್ಬರನ್ನು ಕೆಲಸದಿಂದ ತೆಗೆದುಹಾಕಿದೆ. ಈ ಬಗ್ಗೆ ಮಹಿಳೆ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಆಶಿಯನ್ ಎಂಬವರು ಈ ಕುರಿತ ಸುದೀರ್ಘ ಸ್ಟೋರಿಯೊಂದನ್ನು ರೆಡ್ಡಿಡ್‌ನಲ್ಲಿ ಹಂಚಿಕೊಂಡಿದ್ದಾರೆ. “ಈ ಟಾಕ್ಸಿಕ್ ಕಂಪೆನಿಗೆ ಕೆಲಸಕ್ಕೆ ಸೇರೋದೇ ನನಗೆ ಇಷ್ಟ ಇರ್ಲಿಲ್ಲ. ಮ್ಯಾನೇಜರ್, ಸಿ.ಇ.ಒ ಕಾಟ, ಇಲ್ಲಿನ ಚಿತ್ರ ವಿಚಿತ್ರ ನಿಯಮಗಳು ನಿಜಕ್ಕೂ ನನ್ನನ್ನು ನರಕಕ್ಕೆ ತಳ್ಳಿತ್ತು. ಇವರುಗಳ ಟಾರ್ಚರ್ ನನ್ನ ಮೇಲೆ ಕೆಟ್ದಾಗಿ ಪರಿಣಾಮ ಬೀರಿದ್ದವು. ಇದರಿಂದ ನೋವು ತಿಂದು ಆಫೀಸ್‌ನ ಟಾಯ್ಲೆಟ್ ಅಲ್ಲಿ ಕೂತು ಒಬ್ಬಂಟಿಯಾಗಿ ಅಳುತ್ತಾ ಕೂತ ದಿನಗಳೂ ಇದ್ದವು. ಇದೀಗ ಟಾಕ್ಸಿಟ್ ವರ್ಕ್ ಪ್ಲೇಸ್ ಬಗೆಗಿನ ಲಿಂಕ್ಡ್‌ಇನ್ ಪೋಸ್ಟ್ ಅನ್ನು ಲೈಕ್ ಮಾಡಿದ್ದಕ್ಕೆ, ಈ ಕಂಪೆನಿಯ ಸಿ.ಇ.ಒ ನನ್ನನ್ನು ಕೆಲಸದಿಂದಲೇ ವಜಾಗೊಳಿಸಿದ್ದಾರೆ. ಅಲ್ಲಾ ಪೋಸ್ಟ್ ಲೈಕ್ ಮಾಡೋದರಲ್ಲಿ ಏನಿದೆ, ನಿಜಕ್ಕೂ ಇವರ ಈ ನಡವಳಿಕೆ ನನಗೆ ಬೇಸರ ತರಿಸಿದೆ” ಎಂಬ ಸುದೀರ್ಘ ಬರಹವನ್ನು ಹಂಚಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ಪೋಸ್ಟ್ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ.