ಸೌದಿ ಅರೇಬಿಯಾ: ಇತಿಹಾಸದಲ್ಲಿ ಮೊದಲ ಬಾರಿಗೆ ಸೌದಿ ಅರೇಬಿಯಾದ ಅಲ್‌ಜಾಫ್ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದೆ. ಮರಭೂಮಿ ಪ್ರದೇಶ ಹಾಗೂ ರಸ್ತೆಗಳಲ್ಲಿ ಹಿಮ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Ad
ಸೌದಿ ಅರೇಬಿಯಾದ ಕೆಲವು ಭಾಗಗಳು ಮೊದಲ ಬಾರಿಗೆ ಭಾರೀ ಮಳೆ ಮತ್ತು ಹಿಮಪಾತವನ್ನು ಕಾಣುತ್ತಿವೆ. ಅಲ್-ಜಾವ್ಫ್ ವರ್ಷವಿಡೀ ಶುಷ್ಕ ಹವಾಮಾನಕ್ಕೆ ಹೆಸರುವಾಸಿಯಾಗಿದೆ. ಆದರೆ ಅಲ್-ಜಾವ್ಫ್ ಪ್ರದೇಶವು ಭಾರೀ ಹಿಮಪಾತವನ್ನು ಅನುಭವಿಸುತ್ತಿದ್ದು, ಸ್ಥಳೀಯ ನಿವಾಸಿಗಳಿಗೆ ಆಘಾತವನ್ನು ನೀಡಿದೆ.
Ad
ಮುಂದಿನ ದಿನಗಳಲ್ಲಿ ಈ ಪ್ರದೇಶದಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
Ad
https://x.com/id7is/status/1853215918832136393?
Ad
Ad