ಭಾರತದಲ್ಲಿ ಇದೇ ಮೊದಲ ಬಾರಿಗೆ ಉದ್ದ ಮೂತಿ ಇರುವ ಹಾವಿನ ಹೊಸ ಪ್ರಬೇಧವೊಂದು ಪತ್ತೆಯಾಗಿದ್ದು, ಪರಿಸರ ವಿಜ್ಞಾನಿಗಳು ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಮೇಘಾಲಯ ಹಾಗೂ ಬಿಹಾರದಿಂದ 11,20 ಕಿಲೋ ಮೀಟರ್ ದೂರದಲ್ಲಿ ಈ ಹೊಸ ಜಾತಿಯ ಹಾವೊಂದು ಪತ್ತೆಯಾಗಿದ್ದು, ಈ ರೀತಿಯ ಹಾವನ್ನು ತಾವು ಈ ಹಿಂದೆ ಎಲ್ಲೂ ನೋಡಿಲ್ಲ ಎಂದು ವಿಜ್ಞಾನಿಗಳು ಖಚಿತಪಡಿಸಿದ್ದಾರೆ. ಈ ಹೊಸದಾಗಿ ಕಂಡು ಬಂದ ಹಾವಿನ ಜಾತಿಗೆ ಸೇರಿದ ಎರಡು ವಿಧದ ಹಾವುಗಳು ಇಲ್ಲಿ ಕಂಡು ಬಂದಿವೆ ಎಂದು ಏಷ್ಯಾ ಪೆಸಿಫಿಕ್ ವೈವಿಧ್ಯಕ್ಕೆ ( ಸಂಬಂಧಿಸಿ ಜರ್ನಲ್‌ನಲ್ಲಿ ಪರಿಸರ ವಿಜ್ಞಾನಿಗಳು ಬರೆದುಕೊಂಡಿದ್ದಾರೆ.
2021ರ ಡಿಸೆಂಬರ್ 16 ರಂದು ಮೊದಲ ಬಾರಿಗೆ ಅಸ್ವಸ್ಥಗೊಂಡಿದ್ದ ಈ ಉದ್ದ ಮೂತಿಯ ವೈನ್ ಸ್ನೇಕೊಂದು ಬಿಹಾರದ ಗೊನೌಲಿ ಗ್ರಾಮದಲ್ಲಿ ಬರುವ ವಾಲ್ಮೀಕಿ ಹುಲಿ ಸಂರಕ್ಷಿತಾರಣ್ಯದ ವ್ಯಾಪ್ತಿಯಲ್ಲಿ ಕಂಡು ಬಂದಿತ್ತು.
ಆದರೆ ಅದು ನಂತರದಲ್ಲಿ ಸಾವನ್ನಪ್ಪಿದ್ದು, ಅದರ ದೇಹದಲ್ಲಿ ಯಾವುದೇ ಗಾಯದ ಗುರುತುಗಳಿಲ್ಲದ ಕಾರಣ ಅದು ಹೇಗೆ ಮೃತಪಟ್ಟಿದೆ ಎಂಬುದಕ್ಕೆ ಕಾರಣ ಸಿಕ್ಕಿರಲಿಲ್ಲ ಎಂದು ಏಷ್ಯಾ ಫೆಸಿಫಿಕ್ ಡೈವರ್ಸಿಟಿ ಜರ್ನಲ್‌ನಲ್ಲಿ ಲೇಖಕರು ಬರೆದಿದ್ದಾರೆ. ಈ ವಿಭಿನ್ನ ಹಾವು ಅಸ್ತಿತ್ವದಲ್ಲಿರುವ ಇತರ ಹಾವುಗಳನ್ನೇ ಹೋಲುತ್ತಿದ್ದರು ಇದರ ಉದ್ದನೇಯ ಮೂತಿಯ ಕಾರಣಕ್ಕೆ ಇದು ಬೇರೆ ಹಾವುಗಳಿಂದ ವಿಭಿನ್ನ ಎನಿಸಿದೆ. ಅಲ್ಲೇ ಈ ಪ್ರದೇಶದಲ್ಲಿ ಈ ಹಿಂದೆಂದೂ ಈ ರೀತಿಯ ಹಾವುಗಳು ಕಾಣಿಸಿಕೊಳ್ಳದ ಕಾರಣ ಈ ಹಾವುಗಳನ್ನು ಇಲ್ಲಿ ಹೊಸ ಜಾತಿಯ ಹಾವೆಂದು ಪರಿಗಣಿಸಲಾಗಿದೆ.