ಬೆಂಗಳೂರು ಮೂಲದ ಯುವತಿಯೊಬ್ಬಳು ನಿದ್ದೆ ಮಾಡುವ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ. ಬ್ಯಾಂಕರ್ ಆಗಿರುವ ಸಾಯಿಶ್ವರಿ ಪಾಟೀಲ್ ಎಂಬಾಕೆ ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಸೀಸನ್ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ. ಮಾತ್ರವಲ್ಲದೆ ನಿದ್ರಿಸುವ ಇಂಟರ್ನ್ಶಿಪ್ ಮೂಲಕ 9 ಲಕ್ಷ ರೂಪಾಯಿ ಗೆದ್ದಿದ್ದಾಳೆ.
ವಿಶ್ರಾಂತಿ ಪಡೆಯಲು ಹೆಣಗಾಡುತ್ತಿರುವವರಿಗಾಗಿ ಸ್ಲೀಪ್ ಇಂಟರ್ಶಿಪ್ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಭಾಗವಹಿಸುವವರು ಪ್ರತಿ ರಾತ್ರಿ ಕನಿಷ್ಠ 8ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. ಸಾಯಿಶ್ವರಿ ಪಾಟೀಲ್ ಕೂಡ ಇದರಲ್ಲಿ ಒಬ್ಬರಾಗಿ ಭಾಗವಹಿಸಿದ್ದರು. ಪ್ರೀಮಿಯಂ ಹಾಸಿಗೆ ಮತ್ತು ಸಂಪರ್ಕವಿಲ್ಲದ ಟ್ರ್ಯಾಕರನ್ನು ಇದರಲ್ಲಿ ಒದಗಿಸಲಾಗುತ್ತದೆ. ಇಂಟರ್ನ್ಗಳು ತಮ್ಮ ನಿದ್ರೆಯ ಅಭ್ಯಾಸವನ್ನು ಹೆಚ್ಚಿಸಲು ಅನುಭವಿ ಮಾರ್ಗದರ್ಶಕರ ಕಾರ್ಯಾಗಾರಗಳಲ್ಲಿ ಹಾಜರಾಗಬೇಕಿದೆ.
ಇಂಟರ್ಶಿಪ್ಗೆ ಆಯ್ಕೆಯಾದವರಿಗೆ ಹಲವು ಪ್ರಕ್ರಿಯೆಗಳ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ವಿಡಿಯೋ ಕರೆಯಲ್ಲಿ ಅಭ್ಯರ್ಥಿಗಳು ನಿದ್ರೆ ಮಾಡುವ ಉತ್ಸುಹಕತೆಯನ್ನು ವ್ಯಕ್ತಪಡಿಸಿದ್ದಾರೆ. ಬಳಿಕ ಫೈನಲಿಸ್ಟ್ಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುವ ಕುರಿತಾಗಿ ವೈಯ್ಯಕ್ತಿಕ ಸಂದರ್ಶನಗಳಿಗೆ ಒಳಗಾದರು. ಅದರಂತೆ ಸಾಯಿಶ್ವರಿ ಪಾಟೀಲ್ ವೇಕ್ಫಿಟ್ನ ವಿಶಿಷ್ಟ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಸೀಸನ್ನಲ್ಲಿ ‘ಸ್ಲೀಪ್ ಚಾಂಪಿಯನ್’ ಎಂಬ ಪಟ್ಟ ಅಲಂಕರಿಸಿಕೊಂಡಿದ್ದಾಳೆ.