ಇಂದು 19 ಸೋಮವಾರ ಎಲ್ಲೆಡೆ ರಾಖಿ ಹಬ್ಬದ ಸಂಭ್ರಮ.ಇಲ್ಲಿ ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟುವ ಒಂದು ಸುಂದರವಾದ ಕ್ಷಣ ಈ ಮೂಲಕ ಸಹೋದರಿಯನ್ನು ಯಾವುದೇ ಕ್ಷಣದಲ್ಲೂ ರಕ್ಷಕನಾಗಿ ಇರುವುದು. ಇದೀಗ ಇಂತಹ ಸುಂದರ ಕ್ಷಣದಲ್ಲಿ ಭಾವುಕ ಘಟನೆಯೊಂದು ನಡೆದಿದೆ. ರಕ್ಷಾ ಬಂಧನದ ದಿನವೇ ಸೋದರಿಯೊಬ್ಬಳು ತನ್ನ ಇಬ್ಬರು ಸೋದರರಿಗೆ ರಾಖಿ ಕಟ್ಟಿ ಬಳಿಕ ಆಸ್ಪತ್ರೆಯಲ್ಲೇ ಪ್ರಾಣ ಬಿಟ್ಟಿದ್ದಾಳೆ.
ವರದಿಯ ಪ್ರಕಾರ ಈ ಹುಡುಗಿ ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಪ್ರೀತಿಸುವಂತೆ ಯುವಕನೋರ್ವ ನಿರಂತರ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಈಕೆ ತನ್ನ ಜೀವನವನ್ನು ಕೊನೆಗೊಳಿಸಲು ಯತ್ನಿಸಿದ್ದಳು. ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಈಕೆಯನ್ನು ಪೋಷಕರು ಹಾಗೂ ಸಂಬಂಧಿಗಳು ಮೆಹಬೂಬಾಬಾದ್‌ನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆಕೆಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮುಂಜಾನೆ ಆಕೆ ಸಾವನ್ನಪ್ಪಿದ್ದಾಳೆ. ಸಾಯುವುದಕ್ಕೂ ಮೊದಲು ಆಕೆ ತನ್ನಿಬ್ಬರು ಸೋದರರಿಗೆ ಕೊನೆಯದಾಗಿ ರಾಕಿ ಕಟ್ಟಿ ಕೊನೆಯುಸಿರೆಳೆದಿದ್ದಾಳೆ. ಸದ್ಯ ಈ ಕ್ಷಣದ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
మహబూబాబాద్ జిల్లా నర్సింహులపేట సోదరులకు రాఖీ కట్టి తుదిశ్వాస విడిచిన చెల్లి
కోదాడలో డిప్లొమా చదువుతున్న యువతిని ప్రేమ పేరుతో ఆకతాయుల వేధింపులు తట్టుకోలేక గడ్డి మందు తాగి ఆత్మహత్యయత్నం చేసింది.
ఆసుపత్రిలో కొన ఊపిరితో ఉన్న తను రాఖీ పండగ నాటికి ప్రాణాలతో ఉంటానో లేదో అన్న బాధతో… https://t.co/rO3YBqqo8O pic.twitter.com/k5LMWuJHi4
— Telugu Scribe (@TeluguScribe) August 19, 2024