Bengaluru 24°C

ಗೆಳತಿ ಕೈಗೆ ಗನ್ ಕೊಟ್ಟು ರೀಲ್ಸ್ ಮಾಡಿದ ಪೊಲೀಸ್; ಶಾಕಿಂಗ್ ವಿಡಿಯೋ ವೈರಲ್

Police

ಉತ್ತರ ಪ್ರದೇಶ: ಆಗ್ರಾದಲ್ಲಿ ಇತ್ತೀಚೆಗೆ ಮಹಿಳಾ ಹಾಗೂ ಪುರುಷ ಪೊಲೀಸ್ ನಡುವಿನ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.


ಹೌದು.. . ಇದೀಗ ಮತ್ತೊಂದು ಅಂತಹುದೇ ಪ್ರಕರಣ ನಡೆದಿದ್ದು, ಪೊಲೀಸನೊಬ್ಬ ತನ್ನ ಗೆಳತಿಯ ಕೈಗೆ ಗನ್ ಕೊಟ್ಟು ರೀಲ್ಸ್ ಮಾಡಿದ್ದಾನೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಮನೋಜ್ ಶರ್ಮಾ ಲಕ್ನೋ ಯುಪಿ ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದ್ದು, ಇದರಲ್ಲಿ ಪೊಲೀಸನ ಗನ್ ಅನ್ನು ಆತನ ಗೆಳತಿ ಹಿಡಿದುಕೊಂಡು ‘ಮೇರಾ ಬಾಲಮ್ ಠಾಣೆದಾರ್’ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾಳೆ.


ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಸಮವಸ್ತ್ರದಲ್ಲಿರುವ ಈ ಪೊಲೀಸ್ ಅಧಿಕಾರಿ ಸರ್ಕಾರ ತನಗೆ ನೀಡಿದ್ದ ಗನ್ ಅನ್ನು ಗೆಳತಿಗೆ ನೀಡಿ ಕರ್ತವ್ಯ ಲೋಪ ಎಸಗಿದ್ದಾನೆ. ಹೀಗಾಗಿ ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.


Nk Channel Final 21 09 2023