Bengaluru 23°C
Ad

ಮಾನವೀಯತೆ ಮರೆತ ಮಂದಿ; ಗಾಯಗೊಂಡು ರಸ್ತೆಯಲ್ಲಿ ಬಿದ್ದ ನವಿಲಿನ ಗರಿಗಳನ್ನು ಕಿತ್ತ ಜನರು

National Bird

ನವದೆಹಲಿ: ಗಾಯಗೊಂಡು ರಸ್ತೆಯಲ್ಲಿ ಬಿದ್ದಿರುವ ನವಿಲಿಗೆ ಸಹಾಯ ಬೇಕಿದ್ದಲ್ಲಿ ಜನರು ಅದರ ಗರಿಗಳನ್ನು ಕಿತ್ತು ತಮ್ಮ ಮನೆಗಳಿಗೆ ಕೊಂಡೊಯ್ಯುವ ತಯಾರಿಯಲ್ಲಿ ನಿರತರಾಗಿದ್ದ ಘಟನೆಯೊಂದು ವರದಿಯಾಗಿದೆ. ಹೌದು. . ಘಟನೆಯೊಂದರ ವಿಡಿಯೋ ವೊಂದು ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಕಾಣುತ್ತಿರುವ ಜನರು ಗಾಯಗೊಂಡು ರಸ್ತೆಯಲ್ಲಿ ಬಿದ್ದ ನವಿಲನ್ನು ರಕ್ಷಿಸುವ ಬದಲು ಸಾಯಿಸುತ್ತಿರುವುದು ಕಂಡು ಬಂದಿದೆ.

ಜನರು ನವಿಲಿನ ದೇಹದ ಮೇಲೆ ಕಾಣುವ ಪ್ರತಿಯೊಂದು ಗರಿಗಳನ್ನು ಕಿತ್ತು ರಸ್ತೆಯ ಮೇಲೆ ನವಿಲಿನ ದೇಹ ಎಸೆದಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ಸಖತ್​ ವೈರಲ್​​ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದ್ದು ಎನ್ನುವ ಮಾಹಿತಿ ಇಲ್ಲ.

ಈ ವೀಡಿಯೊವನ್ನು @anitavladivoski X ನಲ್ಲಿ ಹಂಚಿಕೊಂಡಿದ್ದಾರೆ. ಗಾಯಗೊಂಡು ರಸ್ತೆಯಲ್ಲೇ ಬಿದ್ದಿದ್ದ ಪಕ್ಷಿಯನ್ನು ಕಂಡ ಜನರು ಅದಕ್ಕೆ ಸಹಾಯ ಮಾಡುವ ಬದಲು ಅದರ ದೇಹದಿಂದ ಗರಿಗಳನ್ನು ಕೀಳಲು ಆರಂಭಿಸಿದರು. ಗಾಯಗೊಂಡ ನವಿಲು ರಸ್ತೆಯ ಮೇಲೆ ಬಿದ್ದಿರುವುದು ಮತ್ತು ಅದರ ಸುತ್ತಲೂ ಜನರ ಗುಂಪು ಇರುವುದನ್ನು ವೀಡಿಯೊದಲ್ಲಿ ಕಾಣಬಹುದು. ವೀಡಿಯೋ ನೋಡಿದ ನಂತರ ಜನರ ಕೋಪ ತಾರಕಕ್ಕೇರಿದೆ. ಅಲ್ಲಿ ನವಿಲು ಗರಿಗಳನ್ನು ಲೂಟಿ ಮಾಡುವವರನ್ನು ಅನಕ್ಷರಸ್ಥರು ಎಂದು ಹಲವರು ಕಮೆಂಟ್ ಮಾಡಿದ್ದಾರೆ.

Ad
Ad
Nk Channel Final 21 09 2023