Bengaluru 23°C
Ad

ಕಾಂಗ್ರೆಸ್ ಪಕ್ಷದ ಓವರ್ ಕಾನ್ಫಿಡೆನ್ಸ್: ಜಿಲೇಬಿ ಆರ್ಡರ್ ಮಾಡಿದ ಫೋಟೋ ವೈರಲ್‌

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೆಡೆ ಸೋಲನುಭವಿಸಿದರೆ, ಮತ್ತೊಂದೆಡೆ ಅವರ ಅತಿಯಾದ ಆತ್ಮವಿಶ್ವಾಸದಿಂದಾಗಿ ಭಾರೀ ಮುಖಭಂಗವಾಗಿದೆ.

ಹರಿಯಾಣ :ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಒಂದೆಡೆ ಸೋಲನುಭವಿಸಿದರೆ, ಮತ್ತೊಂದೆಡೆ ಅವರ ಅತಿಯಾದ ಆತ್ಮವಿಶ್ವಾಸದಿಂದಾಗಿ ಭಾರೀ ಮುಖಭಂಗವಾಗಿದೆ. ರಾಹುಲ್ ಗಾಂಧಿ ಪ್ರಚಾರದಲ್ಲಿ ಒಂದು ವೇಳೆ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತದಾರರಿಗೆ ಜಿಲೇಬಿ ಹಂಚಿ, ಮೆರವಣಿಗೆ ಮೂಲಕ ಈ ಗೆಲುವಿನ ಸಂಭ್ರಮ ಆಚರಿಸೋಣ ಎಂದು ಕಾರ್ಯಕರ್ತರಿಗೆ ಹೇಳಿದ್ದರು.

ಅದರಂತೆ ಹರಿಯಾಣದಲ್ಲಿ ಕಾಂಗ್ರೆಸ್ ಬಹುಮತದಿಂದ ಗೆದ್ದು ಅಧಿಕಾರದ ಚುಕ್ಕಾಣಿ ಹಿಡಿಯುತ್ತೇವೆ ಎಂಬ ಅತಿಯಾದ ಆತ್ಮವಿಶ್ವಾಸ ಕೈ ಕಾರ್ಯಕರ್ತರು ಜನರಿಗೆ ಜಿಲೇಬಿ ಹಂಚಿದ್ದು, ಅದರೊಂದಿಗೆ ಭವ್ಯ ಮೆರವಣಿಗೆಗೆ ರಥ ಹಾಗೂ ಹತ್ತಾರು ಕುದುರೆಗಳನ್ನು ಕರೆಸಲಾಗಿತ್ತು. ಚುನಾವಣಾ ಪಲಿತಾಂಶ ಆರಂಭದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದರಿಂದ ಕಾರ್ಯಕರ್ತರು ತಮ್ಮ ಓವರ್ ಕಾನ್ಫಿಡೆನ್ಸ್ ನಿಂದ ಜಿಲೇಜಿ ಹಂಚಿದರು. ಆದರೆ ಮತ ಎಣಿಕೆ ಮುಗಿಯುವ ಹಂತಕ್ಕೆ ತಲುಪಿದಾಗ ನಿಧಾನವಾಗಿ ಕುದುರೆ ಹಾಗೂ ರಥಗಳನ್ನು ಕಾರ್ಯಕರ್ತರು ವಾಪಸ್ ಕಳುಹಿಸಿದ್ದಾರೆ.

ಸದ್ಯ ಕಾಂಗ್ರೆಸ್ ಅವರ ಓವರ್ ಕಾನ್ಫಿಡೆನ್ಸ್ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ನೆಟ್ಟಿಗರು ಸಖತ್ ಟ್ರೊಲ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೇ ಇದನ್ನೆ ಗಾಳವಾಗಿ ಬಳಸಿದ ಬಿಜೆಪಿ ಹರಿಯಾಣದಲ್ಲಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನಲೆ ಅಲ್ಲಿನ ಎಲ್ಲಾ ಕಾರ್ಯಕರ್ತರ ಪರವಾಗಿ ರಾಹುಲ್ ಗಾಂಧಿಯವರ ಮನೆಗೆ ಒಂದು ಕೆಜಿ ಜಿಲೇಬಿಯನ್ನು ಹಂಚಲಾಗಿದೆ. ಸದ್ಯ ಜಿಲೇಬಿ ಆರ್ಡರ್ ಮಾಡಿದ ಫೋಟೋವನ್ನು ಬಿಜೆಪಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

Ad
Ad
Nk Channel Final 21 09 2023