ಗುಜರಾತ್: ಇತ್ತೀಚೆಗಿನ ವರ್ಷದಲ್ಲಿ ಹೃದಯಾಘಾತ ಘಟನೆಗಳು ಹೆಚ್ಚಾಗುತ್ತಿದೆ. ಸಂತಸ, ಸಂಭ್ರಮದ ಸನ್ನಿವೇಶದಲ್ಲೂ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಡುವ ಆಘಾತಕಾರಿ ಘಟನೆಗಳು ಅಲ್ಲಲಿ ನಡೆಯುತ್ತಿದೆ. ಇಂಥದ್ದೇ ಒಂದು ಶಾಕಿಂಗ್ ಘಟನೆ ಗುಜರಾತಿನಲ್ಲಿ ನಡೆದಿದೆ.
ಮಗನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಂತಸದಲ್ಲಿ ಪಾರ್ಟಿ ಮಾಡುತ್ತಿದ್ದ ತಾಯಿ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಇತ್ತೀಚೆಗೆ(ಸೆ.14 ರಂದು) ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.5 ವರ್ಷದ ಮಗ ಗೌರಿಕ್ ಹುಟ್ಟುಹಬ್ಬವನ್ನು ಪೋಷಕರು ಅದ್ಧೂರಿಯಾಗಿ ಸೆಲೆಬ್ರೆಟ್ ಮಾಡಿದ್ದಾರೆ. ಕುಟುಂಬದ ಸದಸ್ಯರು ಹಾಗೂ ಆತ್ಮೀಯರಿಗೆ ಬರ್ತ್ ಡೇ ಪಾರ್ಟಿಗೆ ಆಹ್ವಾನ ನೀಡಿದ್ದಾರೆ.
ಈ ವೇಳೆ ಗೌರಿಕ್ ಅವರ ತಾಯಿ ಯಾಮಿನಿಬೆನ್ ಪತಿಯೊಂದಿಗೆ ವೇದಿಕೆಯಲ್ಲಿದ್ದರು. ಸಂಭ್ರಮದಲ್ಲಿದ್ದಾಗಲೇ ಯಾಮಿನಿಬೆನ್ ಇದ್ದಕ್ಕಿದ್ದಂತೆ ಮಗುವನ್ನು ಗಂಡನಿಗೆ ಕೊಟ್ಟು ಅವರ ಹಿಂದೆ ಹೆಜ್ಜೆಯಿಡುವಾಗಲೇ ಕುಸಿದು ಬಿದ್ದಿದ್ದಾರೆ.
महिला को पार्टी में आया अचानक से हार्ट अटैक, हुई मौत…#heartattack #CCTV #Valsad #Vapi #viralvideo #tranding #LatestUpdates #MahanagarTimes pic.twitter.com/tno8inMtx1
— Mahanagar Times (@MahanagarTimes_) September 16, 2024