Bengaluru 24°C
Ad

ಸೀರೆಯುಟ್ಟು ರ‍್ಯಾಂಪ್‌ ವಾಕ್​​ ಮಾಡಿದ ಮಿಸ್ ಆಸ್ಟ್ರೇಲಿಯಾ: ವಿಡಿಯೋ ವೈರಲ್

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಗೆ ಮನಸೋಲದವರು ಯಾರಿದ್ದಾರೆ, ಭಾರತೀಯರೇ ಆಗಿರಲಿ ವಿದೇಶಿಯರೇ ಆಗಿರಲಿ ಸೀರೆ ಉಟ್ಟರೆ ಯಾವ ಭಾರತೀಯ ನಾರಿಗೂ ಕಮ್ಮಿ ಇಲ್ಲ .

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಸೀರೆಗೆ ಮನಸೋಲದವರು ಯಾರಿದ್ದಾರೆ, ಭಾರತೀಯರೇ ಆಗಿರಲಿ ವಿದೇಶಿಯರೇ ಆಗಿರಲಿ ಸೀರೆ ಉಟ್ಟರೆ ಯಾವ ಭಾರತೀಯ ನಾರಿಗೂ ಕಮ್ಮಿ ಇಲ್ಲ .

ವಿದೇಶಿಯ ಮಹಿಳೆಯೊಬ್ಬರು ಸೀರೆ ಉಟ್ಟು ರಾಂಪ್ ವಾಕ್ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ವಿಶ್ವ ಸುಂದರಿ 2024 ರ ಪ್ರತಿಷ್ಠಿತ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಸುತ್ತಿನಲ್ಲಿ ಮಿಸ್ ಆಸ್ಟ್ರೇಲಿಯ ಸೀರೆಯುಟ್ಟು ರ‍್ಯಾಂಪ್​​ನ್ಲಿ ನಡೆದಿದ್ದು, ಸಾಂಸ್ಕೃತಿಕ ಗೌರವ ಮತ್ತು ಜಾಗತಿಕ ಏಕತೆಯ ಬಗ್ಗೆ ಪ್ರಬಲ ಸಂದೇಶವನ್ನು ರವಾನಿಸಿದೆ.

ಅದೇ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿ ಸಿನಿ ಶೆಟ್ಟಿ ಸಂಪ್ರದಾಯಿಕ ಲೆಹಾಂಗ​​​ ತೊಟ್ಟು ರ‍್ಯಾಂಪ್‌ ವಾಕ್​​ ಮಾಡಿದ್ದಾರೆ.

@Brinda_IND ಎಂಬ ಟ್ವಿಟರ್​​ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ಮೇ 31ರಂದು ಹಂಚಿಕೊಂಡಿರುವ ಈ ವಿಡಿಯೋ ಒಂದೇ ದಿನದಲ್ಲಿ 8ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ.

ತಮ್ಮದೇ ಆದ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುವ ಭಾರತೀಯ ಯುವ ಪೀಳಿಗೆಗೆ ಉತ್ತಮ ಸಂದೇಶವಾಗಿದೆ.

Ad
Ad
Nk Channel Final 21 09 2023
Ad