Ad

ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಕ್ರೇಟ್‌ನಲ್ಲಿ ಸಾಗಿಸಿದ ವ್ಯಕ್ತಿ; ವಿಡಿಯೋ ವೈರಲ್‌

Baby

ಹೈದರಾಬಾದ್: ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಭಾರೀ ಮಳೆಯ ಕಾರಣದಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ಮಂಗಳವಾರ ವೈರಲ್‌ ಆಗಿರುವ ದೃಶ್ಯವೊಂದರಲ್ಲಿ ಕುತ್ತಿಗೆವರೆಗೆ ಬಂದ ಪ್ರವಾಹದ ನೀರಿನಲ್ಲಿ ನವಜಾತ ಶಿಶುವನ್ನು ಪ್ಲಾಸ್ಟಿಕ್‌ ಕ್ರೇಟ್‌ನಲ್ಲಿ ಸಾಗಿಸುತ್ತಿರುವ ದಾರುವ ದೃಶ್ಯ ಕಂಡಿದೆ.

ಇಬ್ಬರು ವ್ಯಕ್ತಿಗಳು ತಮ್ಮ ಕುತ್ತಿಗೆಯವರೆಗೂ ಬಂದ ನೀರಿನಲ್ಲಿ ಪ್ಲಾಸ್ಟಿಕ್‌ ಕ್ರೇಟ್‌ನಲ್ಲಿ ನವಜಾತ ಶಿಶುವನ್ನು ಸಾಗಿಸುತ್ತಿದ್ದಾರೆ. ಈ ದೃಶ್ಯ ದಕ್ಷಿಣದ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರವಾಹದಿಂದ ಉಂಟಾದ ಸಂಕಟದ ದೃಶ್ಯಗಳಲ್ಲಿ ಅತ್ಯಂತ ದಾರುಣವಾಗಿದೆ.ಹೈ ಆಂಗಲ್‌ನಲ್ಲಿ ತೆಗೆದುಕೊಳ್ಳಲಾಗಿರುವ ವಿಡಿಯೋದಲ್ಲಿ ನವಜಾತ ಶಿಶುವನ್ನು ಫೋಮ್‌ ಬೋರ್ಡ್‌ನ ಮೇಲೆ ಇರಿಸಲಾಗಿರುವ ಹಳದಿ ಬಣ್ಣದ ಪ್ಲಾಸ್ಟಿಕ್‌ ಕ್ರೇಟ್‌ನಲ್ಲಿ ದೂಡಿಕೊಂಡು ಹೋಗಲಾಗುತ್ತಿದೆ.

ಆಂಧ್ರಪ್ರದೇಶದ ವಿಜಯವಾಡದ ದೃಶ್ಯ ಇದು ಎನ್ನಲಾಗಿದೆ. ಆಂಧ್ರಪ್ರದೇಶದ ವಿಜಯವಾಡದ ದೃಶ್ಯ ಇದಾಗಿದ್ದು, ಸಿಂಗ್‌ ನಗರ ಪ್ರದೇಶದಲ್ಲಿ ಪ್ರವಾಹದಿಂದಾಗಿ ರಸ್ತೆಗಳು ನದಿಗಳಂತೆ ಕಂಡಿದ್ದವು. ಇದರಿಂದಾಗಿ ಮನೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದರಿಂದ ಕುಟುಂಬ ಮಗುವನ್ನು ತಮ್ಮ ಮನೆಯಿಂದ ಸ್ಥಳಾಂತರ ಮಾಡಬೇಕಾದ ಪರಿಸ್ಥಿತಿ ಎದುರಾಗಿತ್ತು.

Ad
Ad
Nk Channel Final 21 09 2023