Bengaluru 24°C
Ad

ವೈದ್ಯಕೀಯ ಸಮಾವೇಶದಲ್ಲಿ ಐಟಂ ಡಾನ್ಸ್‌ಗೆ ಆಕ್ರೋಶ : ವೀಡಿಯೋ ವೈರಲ್‌

Dancs

ಚೆನ್ನೈ: ಇಲ್ಲಿನ ಮೆಡಿಕಲ್ ಕಾನ್ಫರೆನ್ಸ್‌ನಲ್ಲಿ ನಡೆದ ಡಾನ್ಸ್‌ ಕಾರ್ಯಕ್ರಮವೊಂದರ ವೀಡಿಯೋ ಈಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯಕೀಯ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಪ್ರದರ್ಶಿಸಿದ ನೃತ್ಯಕ್ಕೆ ಈಗ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ಕೊಲೊನ್ & ರೆಕ್ಟಲ್‌ ಸರ್ಜನ್‌ಗಳ ಅಸೋಸಿಯೇಷನ್‌ನ  47ನೇ ವರ್ಷದ ವಾರ್ಷಿಕ ಸಮಾವೇಶದಲ್ಲಿ ಮಹಿಳಾ ಡಾನ್ಸರ್ ಒಬ್ಬರು ಅಸಭ್ಯವಾಗಿ ಬಟ್ಟೆ ತೊಟ್ಟು ನರ್ತನ ಮಾಡಿದ್ದಾರೆ. ಸ್ಟೇಜ್‌ನಿಂದ ಕೆಳಗೆ ಕ್ಯಾಬರೆ ಡಾನ್ಸರ್ ರೀತಿ ಸಣ್ಣಬಟ್ಟೆ ತೊಟ್ಟು ಡಾನ್ಸರ್‌ ಒಬ್ಬಳು  ವಿಕ್ರಾಂತ್ ರೋಣ ಸಿನಿಮಾದ ಐಟಂ ಹಾಡು ರಾ ರಾ ರಕ್ಕಮ್ಮಗೆ ಎರ್ರಾಬಿರ್ರಿ ಮೈ ಬಳುಕಿಸಿದ್ದಾರೆ. ಆಕೆ ಬರೀ ಡಾನ್ಸ್ ಮಾಡಿದ್ದು ಮಾತ್ರವಲ್ಲದೇ ಅಲ್ಲಿ ಕೈಯಲ್ಲಿ ಮದ್ಯ ಹಿಡಿದುಕೊಂಡಿದ್ದ ಕೆಲ ಪುರುಷರ ಎದುರು ಕುಣಿದ ಆಕೆ ಬಳಿಕ ಅಲ್ಲಿದ್ದ ಪುರುಷರೊಬ್ಬರನ್ನು ತನ್ನತ್ತ ಎಳೆದುಕೊಂಡು ಅವರು ಹೆಜ್ಜೆ ಹಾಕುವಂತೆ ಡಾನ್ಸ್ ಮಾಡಿದ್ದಾಳೆ. ಆದರೆ ಮೆಡಿಕಲ್ ಕಾನ್ಫರೆನ್ಸ್‌ನಲ್ಲಿ ಈ ರೀತಿ ಅಸಭ್ಯ ನೃತ್ಯ ಮಾಡಿರುವುದಕ್ಕೆ ಒಬ್ಬರು  ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Sutirtha (@ginger_bread_s) ಎಂಬುವವರು ಈ ವೀಡಿಯೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತೀಯ ಕೊಲೊನ್ ಮತ್ತು ರೆಕ್ಟಲ್ ಸರ್ಜನ್ಸ್‌ಗಳ  ಈ ವಾರ್ಷಿಕ ಸಮ್ಮೇಳನವು 19 ರಿಂದ 21 ಸೆಪ್ಟೆಂಬರ್‌ವರೆಗೆ ಚೆನ್ನೈನಲ್ಲಿ ನಡೆಯಿತು. ಇದು ಮಾನವ ಅಂಗರಚನಾಶಾಸ್ತ್ರದ ಬಗ್ಗೆ ತಿಳಿದುಕೊಳ್ಳಲು ಮಾಡಿದ ತರಬೇತಿಯೇ ಎಂದು ನಾನು @IMAIindiaOrg ದಿಂದ  ತಿಳಿದುಕೊಳ್ಳಲು ಬಯಸುತ್ತೇನೆ. ವಯಸ್ಸಾದ ವೈದ್ಯರು  ಸಾರ್ವಜನಿಕವಾಗಿ ಮಹಿಳೆಯನ್ನು ಹಿಡಿದುಕೊಳ್ಳುವುದು ಯಾವ ರೀತಿ ವೈದ್ಯಕೀಯ ಅಭ್ಯಾಸದ ಭಾಗ? ಎಂದು ಅವರು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

Ad
Ad
Nk Channel Final 21 09 2023