ಕಾಡಿನಲ್ಲಿರುವ ಇತರೆ ಪ್ರಾಣಿಗಳಂತೆ ಕರಡಿಗಳು ಕೂಡಾ ಮನುಷ್ಯನ ಮೇಲೆ ದಾಳಿ ನಡೆಸುತ್ತವೆ. ಇಲ್ಲೊಬ್ಬ ಭಂಡ ಧೈರ್ಯದ ಯುವಕ ಹೋಗಿ ಹೋಗಿ ಕಾಡಿನಲ್ಲಿರುವ ಕರಡಿಯ ಗುಹೆಯೊಳಗೆಯೇ ಕೂರಲು ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ದೈತ್ಯ ಕರಡಿಯೊಂದು ಎಂಟ್ರಿ ಕೊಟ್ಟಿದ್ದು, ಅಯ್ಯೋ ದೇವ್ರೆ ಹೇಗಪ್ಪಾ ಈ ಕರಡಿಯಿಂದ ಪಾರಾಗೋದು ಎಂದು ಪರದಾಡಿದ್ದಾನೆ. ಜೊತೆಗೆ ಆ ಸಂದರ್ಭದಲ್ಲಿ ಬಹಳ ತಾಳ್ಮೆಯಿಂದ ವರ್ತಿಸಿದ ಯುವಕ ಕರಡಿಯ ದಾಳಿಯಿಂದ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ಈ ಕುರಿತ ವಿಡಿಯೋವೊಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ಈ ಕುರಿತ ಪೋಸ್ಟ್ ಒಂದನ್ನು ಸರ್ಬಿಯಾದ ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸ್ಟೀಫನ್ ಜಾಂಕೋವಿಕ್ (stefan_jankovich) ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಾಡಿಗೆ ಹೋಗಿದ್ದಂತಹ ಜಾಂಕೋವಿಕ್ ಕರಡಿಗಳು ಮಲಗುವಂತಹ ಗುಹೆಗಳಿಗೆ ಒಮ್ಮೆ ಭೇಟಿ ಕೊಡ್ಬೇಕಲ್ವಾ ಎಂದು ಕರಡಿಯ ಗುಹೆಗೆ ಹೋಗಿದ್ದು, ಅಲ್ಲಿ ಅವರು ಹಾಯಾಗಿ ಕುಳಿತಿದ್ದ ಸಂದರ್ಭದಲ್ಲಿ ದೈತ್ಯ ಕರಡಿಯೊಂದಿ ಎಂಟ್ರಿ ಕೊಟ್ಟಿದೆ. ಆದ್ರೆ ವಿಶೇಷ ಏನಪ್ಪಾ ಅಂದ್ರೆ ಬೇರೆ ಕರಡಿಗಳಂತೆ ಈ ಕರಿಡಿಯೂ ಕೋಪದಲ್ಲಿ ಜಾಂಕೋವಿಕ್ ಮೇಲೆ ಯಾವುದೇ ದಾಳಿಯನ್ನು ಮಾಡಿಲ್ಲ. ಸದ್ಯ ಈ ವಿಡಿಯೋ ಸಕತ್ ವೈರಲ್ ಆಗ್ತಿದೆ.