Bengaluru 22°C
Ad

ಕೇಕ್ ಕತ್ತರಿಸಿ, ತಿಂದ ನಂತರ ಪತ್ನಿಗೆ ಕೂಲ್‌ ಕ್ಯಾಪ್ಟನ್ ಧೋನಿ ಕೇಳಿದ್ದೇನು?

Ms

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ‌ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

Ad
300x250 2

ಇಡೀ ವಿಶ್ವದ ತುಂಬೆಲ್ಲಾ ಕೋಟ್ಯಂತರ ಅಭಿಮಾನಿಗಳನ್ನು ಧೋನಿ ಹೊಂದಿದ್ದು, ಫ್ಯಾನ್ಸ್ ಸೋಶಿಯಲ್ ಮೀಡಿಯಾ ಮೂಲಕ ಕೂಲ್ ಕ್ಯಾಪ್ಟನ್‌ಗೆ ವಿಶ್ ಮಾಡುತ್ತಿದ್ದಾರೆ. ಪತ್ನಿ ಸಾಕ್ಷಿ ಜೊತೆ ಕೇಕ್ ಮಾಡಿ ಬರ್ತ್ ಡೇ ಆಚರಿಸಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಸಾಕ್ಷಿ ಪತಿ ಬರ್ತ್ ಡೇ ಆಚರಣೆಯ ವಿಡಿಯೋವನ್ನು ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ. ಕೇಕ್ ಕತ್ತರಿಸಿ ತಿಂದ ಬಳಿಕ ಧೋನಿ ದಿಢೀರ್ ಅಂತ ಪತ್ನಿ ಸಾಕ್ಷಿ ಅವರಿಗೆ ದಿಢೀರ್ ಅಂತ ಪ್ರಶ್ನೆಯೊಂದನ್ನು ಕೇಳುತ್ತಾರೆ. ಆಮೇಲೆ ಅಲ್ಲಿದ್ದವರ ಉತ್ತರ ಕೇಳಿ ಧೋನಿ ನಿರಾಳರಾಗುತ್ತಾರೆ.

ವೈರಲ್ ಆಗಿರುವ ವಿಡಿಯೋದಲ್ಲಿ ಮಹೇಂದ್ರ ಸಿಂಗ್ ಧೋನಿ ಪತ್ನಿ ಸಾಕ್ಷಿ ಜೊತೆಯಲ್ಲಿ ಕೇಕ್ ಕತ್ತರಿಸುತ್ತಾರೆ. ನಂತರ ಸಾಕ್ಷಿ ಕೇಕ್‌ನ್ನು ಪತಿಗೆ ತಿನ್ನಿಸುತ್ತಾರೆ. ಆನಂತರ ಧೋನಿ ಸಹ ಪತ್ನಿಗೆ ಕೇಕ್ ತಿನ್ನಿಸುತ್ತಾರೆ. ಆನಂತರ ಸಾಕ್ಷಿ ಪತಿಗೆ ನಮಸ್ಕರಿಸಿ, ಕೈ ಮುಗಿದು ಪಕ್ಕಕ್ಕೆ ಸರಿಯುತ್ತಾರೆ. ಕೇಕ್ ತಿನ್ನುವಾಗ ಇದು ಎಗ್‌ಲೆಸ್ ಕೇಕ್ ಅಲ್ಲವಾ ಎಂದು ಕೇಳುತ್ತಾರೆ. ಒಂದು ಕ್ಷಣ ಧೋನಿ ಫುಲ್ ಶಾಕ್ ಆಗಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಹೌದು ಎಂಬ ಉತ್ತರ ಕೇಳುತ್ತಿದ್ದಂತೆ ಧೋನಿ ನಿರಾಳರಾದಂತೆ ಕಾಣುತ್ತಾರೆ.

ಮಹೇಂದ್ರ ಸಿಂಗ್ ಧೋನಿ ವಯಸ್ಸು 43 ಆದ್ರೂ ಇಂದಿಗೂ 20ರ ಯುವಕನಂತೆ ಬ್ಯಾಟ್ ಬೀಸುತ್ತಾರೆ.

https://www.instagram.com/reel/C9F3jV5K8eA/?utm_source=ig_embed&utm_campaign=loading

Ad
Ad
Nk Channel Final 21 09 2023
Ad