Ad

ಇದು 6 ಮಂದಿ ಪತ್ನಿಯರು 1,000 ಮಕ್ಕಳು ಹೊಂದಿರುವ ವಿಶ್ವದ ಅತ್ಯಂತ ಹಿರಿಯ ಮೊಸಳೆ

Nile Crocodile

ವಿಶ್ವದಲ್ಲಿ ಅತ್ಯಂತ ಸುದೀರ್ಘ ವರ್ಷ ಬದುಕುವ ಪ್ರಾಣಿ ಎಂದರೆ ಅದು ಆಮೆ. ಆದರೆ ಇಲ್ಲೊಂದು ಮೊಸಳೆ ಈಗ ದೀರ್ಘಕಾಲ ಬದುಕಿರುವ ಪ್ರಾಣಿ ಎಂಬ ಬಿರುದು ಪಡೆದುಕೊಂಡಿದೆ.

ಹೌದು. . . ಸುಮಾರು 700 ಕೆ.ಜಿ ತೂಗುವ ಈ ಬೃಹತ್ ಮೊಸಳೆ 123 ವರ್ಷ ಕಳೆದಿದೆ. ಇದು 16 ಅಡಿ ಉದ್ದವಿದ್ದು ನರಭಕ್ಷಕ ಎಂದು ಕುಖ್ಯಾತಿ ಸಹ ಈ ಮೊಸಳೆಗಿದೆ. ಹೆನ್ರಿ ಎಂದು ಕರೆಯಲಾಗುವ ಈ ಮೊಸಳೆ ನದಿ ತೀರವಾಗಿರುವ ಹಾಗೂ ಯುನೆಸ್ಕೋ ಪಾರಂಪರಿಕ ಪಟ್ಟಿಗಳ ತಾಣವಾಗಿರುವ ಬೋಟ್ಸ್ವಾನಾದ ಒಕಾವಾಂಗೋ ಡೆಲ್ಟಾ ಪ್ರದೇಶದಲ್ಲಿ ಪತ್ತೆಯಾಗಿತ್ತು.

ಇದು 16 ಡಿಸೆಂಬರ್ 1900ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದೆ. ಅಲ್ಲಿಂದ ಈ ಮೊಸಳೆಯನ್ನು ತರಲಾಗಿತ್ತು. ಈಗ ಅತ್ಯಂತ ದೊಡ್ಡ ಕೋರೆ ಹಲ್ಲು ಹಾಗೂ ಉದ್ದದ ಬಾಲ ಹೊಂದಿರುವ ಏಕೈಕ ಮೊಸಳೆ ಇದು.

ಸದ್ಯ ಈ ಮೊಸಳೆಗೆ ಬರೊಬ್ಬರಿ 6 ಮಡದಿಯರಿದ್ದು 10 ಸಾವಿರಕ್ಕೂ ಹೆಚ್ಚಿನ ಮಕ್ಕಳನ್ನು ಹೊಂದಿದೆ. 1900 ರ ದಶಕದ ಆರಂಭದಲ್ಲಿ, ಬೋಟ್ಸ್ವಾನಾದ ಸ್ಥಳೀಯ ಬುಡಕಟ್ಟು ಜನಾಂಗದವರಲ್ಲಿ ಹೆನ್ರಿ ಕುಖ್ಯಾತಿ ಗಳಿಸಿತ್ತು. ಬುಡಕಟ್ಟು ಜನರು ಊಟಕ್ಕಾಗಿ ಅಲೆದಾಡುವಾಗ ಹಾಗೂ ನೀರಿನ ಮೂಲ ಹುಡುಕುವಾಗ ಈ ಮೊಸಳೆ ಆ ಬುಡಕಟ್ಟಿನ ಹಲವು ಜನರನ್ನು ತಿಂದುಬಿಟ್ಟಿತ್ತು. ಹೀಗಾಗಿ ಈ ಮೊಸಳೆಯನ್ನ ನರಭಕ್ಷಕ ರಾಕ್ಷಸ ಅಂತಲೇ ಕರೆಯುತ್ತಿದ್ದರು.

ಹೀಗಾಗಿ ಈ ಮೊಸಳೆ ಹಿಡಿಯಬೇಕು ಎಂದು ತಜ್ಞರ ತಂಡ ಯೋಚಿಸಿತ್ತು. ಹೀಗಾಗಿ ಪ್ರಸಿದ್ಧ ಬೇಟೆಗಾರ ಸರ್ ಹೆನ್ರಿ ನ್ಯೂಮನ್ ಅವರ ಸಹಾಯ ಕೋರಲಾಗಿತ್ತು. ಮೊದಲಿಗೆ ಈ ಮೊಸಳೆಯನ್ನ ಗುಂಡಿಟ್ಟು ಕೊಲ್ಲಲು ನಿರ್ಧರಿಸಲಾಗಿತ್ತು. ಆದ್ರೆ ಹೆನ್ರಿ ಅವರ ಪ್ರಕಾರ ಈ ಮೊಸಳೆಯನ್ನು ಹಿಡಿದು ರಕ್ಷಿಸಿದರೆ ಮುಂದೆ ದೊಡ್ಡ ಆಕರ್ಷಣೆಯಾಗಲಿದೆ ಎಂಬ ಸೂಚನೆ ನೀಡಿದರು ಅವರ ಸೂಚನೆಯ ಮೇರೆಗೆ ಈ ಮೊಸಳೆಯನ್ನು ಸೆರೆಹಿಡಿಯಲಾಗಿತ್ತು. ಹಾಗೆ ಈ ಮೊಸಳೆಗೆ ಅವರ ಹೆಸರನ್ನೇ ಇಡಲಾಗಿತ್ತು.

ಕಳೆದ ಮೂರು ದಶಕಗಳಿಂದ, ಹೆನ್ರಿ ದಕ್ಷಿಣ ಆಫ್ರಿಕಾದ ಸ್ಕಾಟ್‌ಬರ್ಗ್‌ನಲ್ಲಿರುವ ಕ್ರೋಕ್‌ವರ್ಲ್ಡ್ ಸಂರಕ್ಷಣಾ ಕೇಂದ್ರದಲ್ಲಿ ನೆಲೆಸಿದೆ.

Ad
Ad
Nk Channel Final 21 09 2023