Bengaluru 23°C
Ad

ರೇವ್ ಪಾರ್ಟಿ ಪ್ರಕರಣ : ನಟಿ ಹೇಮಾಗೆ ನ್ಯಾಯಾಂಗ ಬಂಧನ ವಿಸ್ತರಣೆ

ರೇವ್‌ಪಾರ್ಟಿ ಡ್ರಗ್ಸ್‌ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟಿ ಹೇಮಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಮುಂದೂಡಲಾಗಿದೆ.

ಬೆಂಗಳೂರು: ರೇವ್‌ಪಾರ್ಟಿ ಡ್ರಗ್ಸ್‌ ಸೇವಿಸಿದ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ನಟಿ ಹೇಮಾ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಮುಂದೂಡಲಾಗಿದೆ.ನ್ಯಾಯಾಂಗ ಬಂಧನದಲ್ಲಿದ್ದ ಅವರು ಸಿಸಿಬಿ ಅಧಿಕಾರಿಗಳು ಒಂದು ದಿನದ ಕಸ್ಟಡಿಗೆ ತೆಗೆದುಕೊಂಡಿದ್ದರು.ಗುರುವಾರ ಆ ಅವಧಿ ಮುಕ್ತಾಯಗೊಂಡ ಕಾರಣ ಮತ್ತೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ

ಆನೇಕಲ್​ನ ನಾಲ್ಕನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್​​ಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.  ಬುಧವಾರ ಹೇಮಾರನ್ನು ಕೋರ್ಟ್​ಗೆ ಹಾಜರುಪಡಿಸಿದ್ದ ಸಿಸಿಬಿ ಪೊಲೀಸರು ತಮ್ಮ ವಶಕ್ಕೆ ನೀಡುವಂತೆ ಕೋರಿದ್ದರು. ಅದಕ್ಕೆ ಸಮ್ಮತಿ ಕೂಡ ಸಿಕ್ಕಿತ್ತು.

Ad
Ad
Nk Channel Final 21 09 2023
Ad