ಉತ್ತರ ಪ್ರದೇಶ : ನಿಯತ್ತಿಗೆ ಹೆಸರಾದ ಪ್ರಾಣಿ ಎಂದರೆ ನಾಯಿ, ಒಂದು ತುತ್ತು ಅನ್ನಕೊಟ್ಟ ಮಾಲೀಕನಿಗೆ ಅದು ಜೀವನಪರ್ಯಂತ ನಿಯತ್ತಾಗಿ ಮಾಲಿಕನ ಜೊತೆ ಇರುತ್ತದೆ. ಬಹಳಷ್ಟು ಮಂದಿ ಈಗ ನಾಯಿ ಯನ್ನು ತಮ್ಮ ಮಕ್ಕಳಂತೆ ಸಾಕುತ್ತಾರೆ. ಅದೇ ರೀತಿ ತನ್ನನ್ನು ಸಾಕಿದವರ ರಕ್ಷಣಗೆ ತನ್ನ ಜೀವವನ್ನೇ ಪಣಕಿಡುವ ಪ್ರಾಣಿ ನಾಯಿ. ಸಾಕು ಪ್ರಾಣಿಗಳ ಹಲವಾರು ರೀತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಇಂತಹದ್ದೇ ಇಂದು ಘಟನೆ ನಡೆದಿದ್ದು ಜಾನಿ ಹೆಸರಿನ ಪಿಟ್ ಬುಲ್ ನಾಯಿ ಕಾಳಿಂಗ ಸರ್ಪದಿಂದ ಮಕ್ಕಳನ್ನು ರಕ್ಷಿಸಿದೆ.
ಈ ಘಟನೆ ಉತ್ತರ ಪ್ರದೇಶದ ಝಾನ್ಸಿಯಲ್ಲಿ ನಡೆದಿದೆ. ಶಿವಗಣೇಶ್ ಕಾಲೋನಿಯಲ್ಲಿರುವ ಮನೆಯೊಂದರ ತೋಟದಲ್ಲಿ ಮನೆ ಕೆಲಸದವರ ಮಕ್ಕಳು ಆಟವಾಡುತ್ತಿದ್ದ ವೇಳೆಗೆ ಹಾವು ನುಗ್ಗಿತ್ತು. ಮಕ್ಕಳು ಅದನ್ನು ನೋಡಿ ಕಿರುಚಿಕೊಂಡಿದ್ದಾರೆ. ಸರ್ಪವನ್ನು ನೋಡಿ ಮಕ್ಕಳು ಏನು ಮಾಡಬೇಕು ಎಂದು ಗೊತ್ತಾಗದೇ ದಂಗಾಗಿ ಹೋಗಿದ್ದಾರೆ. ಹಾವು ತಮ್ಮ ಕಡೆ ಬರುತ್ತಿರುವುದನ್ನು ನೋಡಿದ ಅವರಿಗೆ ಉಸಿರೇ ನಿಂತಂತಾಗಿದೆ. ಮಕ್ಕಳ ಚೀರಾಟವನ್ನು ಅಲ್ಲಿಯೇ ಇದ್ದ ಜೆನ್ನಿ ಕೇಳಿಸಿಕೊಂಡಿದೆ. ಅದನ್ನು ಕಟ್ಟಿಹಾಕಲಾಗಿತ್ತು. ಆದರೆ ಮಕ್ಕಳಿಗೆ ಏನೋ ಅಪಾಯ ಸಂಭವಿಸಿದೆ ಎಂದು ಅರಿತ ನಾಯಿ ಸರಪಳಿಯನ್ನು ತುಂಡರಿಸಿಕೊಂಡು ಬಂದು ಹಾವಿನ ಮೇಲೆ ದಾಳಿ ಮಾಡಿದೆ. ಈ ಭೀಕರ ಕಾಳಗದ ವಿಡಿಯೋ ವೈರಲ್ ಆಗಿದೆ. ಕೊನೆಗೆ ಹಾವನ್ನು ಸಾಯಿಸುವಲ್ಲಿ ಜೆನ್ನಿ ಯಶಸ್ವಿಯಾಗಿದೆ.
झांसी से एक वीडियो वायरल हुआ है, जहां पिटबुल और कोबरा की खतरनाक लड़ाई हो रही है।
गार्डन में कुछ बच्चे खेल रहे थे. #पिटबुल की नजर कोबरा पर पड़ी तो उसने अपने दांतों से रस्सी को काटा और कोबरा से भिड़ गया. पिटबुल ने कोबरा को अपने मुंह में दबाया और जमीन पर पटक-पटकर उसे मार डाला। pic.twitter.com/bNbPJnGQX8
— Vishal Singh 🇮🇳 (@vishal_rajput01) September 24, 2024