Ad

ಕುರಾನ್‌ ಗ್ರಂಥಕ್ಕೆ ಅವಮಾನಿಸಿದ ವ್ಯಕ್ತಿಯನ್ನು ಜೀವಂತವಾಗಿ ದಹಿಸಿದ ಜನರು

ಮುಸ್ಲಿಮ್‌ ಜನಾಂಗದ ಪವಿತ್ರ ಗ್ರಂಥವಾದ ಕುರಾನ್‌ ಗ್ರಂಥವನ್ನು ಬೆಂಕಿ ಹಚ್ಚಿ ಅವಮಾನಿಸಿದರಿಂದ ರೊಚ್ಚಿಗೆದ್ದ ಜನರು ಆತನನ್ನು ಜೀವಂತವಾಗಿ ಸುಟ್ಟ ಘಟನೆ ನಡೆದಿದೆ.ಘಟನೆ ಈಶಾನ್ಯ ಪಾಕಿಸ್ತಾನದ ಖೈಬರ್‌ ಪಖ್ತುನ್ ಖಾವಾದ ಸ್ವಾತ್‌ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

ಇಸ್ಲಾಮಾಬಾದ್:‌ ಮುಸ್ಲಿಮ್‌ ಜನಾಂಗದ ಪವಿತ್ರ ಗ್ರಂಥವಾದ ಕುರಾನ್‌ ಗ್ರಂಥವನ್ನು ಬೆಂಕಿ ಹಚ್ಚಿ ಅವಮಾನಿಸಿದರಿಂದ ರೊಚ್ಚಿಗೆದ್ದ ಜನರು ಆತನನ್ನು ಜೀವಂತವಾಗಿ ಸುಟ್ಟ ಘಟನೆ ನಡೆದಿದೆ.ಘಟನೆ ಈಶಾನ್ಯ ಪಾಕಿಸ್ತಾನದ ಖೈಬರ್‌ ಪಖ್ತುನ್ ಖಾವಾದ ಸ್ವಾತ್‌ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿ ತಿಳಿಸಿದೆ.

Ad
300x250 2

ಕೋಪಗೊಂಡ ಜನರು ಮಸೀದಿಯಲ್ಲಿ ಮೈಕ್​ನಲ್ಲಿ ಘೋಷಣೆ ಮಾಡಿ ಎಲ್ಲರೂ ಸೇರುವಂತೆ ಮಾಡಿದರು, ಪೊಲೀಸ್​ ಠಾಣೆಯ ಸುತ್ತ ಜನರ ಗುಂಪು ಸುತ್ತುವರೆಯಿತು. ಪೊಲೀಸ್​ ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ಎಳೆದುತಂದು ಪೊಲೀಸರೆದುರೇ ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.

ಪೊಲೀಸ್​ ಅಧಿಕಾರಿ ಮಾತನಾಡಿ, ಮೃತರು ಸಿಯಾಲ್‌ಕೋಟ್‌ನ ನಿವಾಸಿಯಾಗಿದ್ದು, ಮಾದಯನ್ ತೆಹಸಿಲ್‌ನಲ್ಲಿ ಪವಿತ್ರ ಕುರಾನ್‌ನ ಕೆಲವು ಪುಟಗಳನ್ನು ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇತ್ತ ಇವರನ್ನು ನಿಯಂತ್ರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ ಆದರೆ ಅದಕ್ಕೆ ಯಾರೂ ಹೆದರದೆ ಆತನ್ನು ಸಾಯುವವರೆಗೂ ದೊಣ್ಣೆಯಲ್ಲಿ ಹೊಡೆದು ನಂತರ ಸುಟ್ಟುಹಾಕಿದ್ದಾರೆ.

https://x.com/swati_gs/status/1803996291103678692

Ad
Ad
Nk Channel Final 21 09 2023
Ad