Bengaluru 25°C
Ad

ಆಸ್ಪತ್ರೆಯಲ್ಲಿ ಸಾಕು ನಾಯಿಗೆ ಕ್ಲಿಷ್ಟಕರ ಹೃದಯ ಶಸ್ತ್ರಚಿಕಿತ್ಸೆ: ಏಷ್ಯಾದಲ್ಲೇ ಮೊದಲು

ಹೃದ್ರೋಗದಿಂದ ಬಳಲುತ್ತಿದ್ದ ಶ್ವಾನಕ್ಕೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಯಶಸ್ವಿಯಾಗಿದೆ. ಇಂತಹ ಅಪರೂಪದ ಚಿಕಿತ್ಸೆ ನಡೆದಿದ್ದು ದೇಶ ಮತ್ತು ಏಷ್ಯಾದಲ್ಲೇ ಮೊದಲಾಗಿದೆ. ಶ್ವಾನ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ.

ನವದೆಹಲಿ: ಹೃದ್ರೋಗದಿಂದ ಬಳಲುತ್ತಿದ್ದ ಶ್ವಾನಕ್ಕೆ ದೆಹಲಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಯಶಸ್ವಿಯಾಗಿದೆ. ಇಂತಹ ಅಪರೂಪದ ಚಿಕಿತ್ಸೆ ನಡೆದಿದ್ದು ದೇಶ ಮತ್ತು ಏಷ್ಯಾದಲ್ಲೇ ಮೊದಲಾಗಿದೆ. ಶ್ವಾನ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ.

ಏಳು ವರ್ಷದ ಬೀಗಲ್ ಜೂಲಿಯೆಟ್ ಎಂಬ ಸಾಕು ನಾಯಿ ಕಳೆದ ಎರಡು ವರ್ಷಗಳಿಂದ ಮಿಟ್ರಲ್ ವಾಲ್ವ್ (ಹೃದಯ ಸಂಬಂಧಿ ಕಾಯಿಲೆ) ನಿಂದ ಬಳಲುತ್ತಿತ್ತು. ರಕ್ತ ಪರಿಚಲನೆಯಲ್ಲಿ ಸಮಸ್ಯೆಯಾಗಿ ಅನಾರೋಗ್ಯಕ್ಕೀಡಾಗಿತ್ತು. ಪ್ರೀತಿಯಿಂದ ಸಾಕಿದ ಶ್ವಾನ ಅನಾರೋಗ್ಯದಿಂದ ಬಳಲುತ್ತಿರುವುದು ಮಾಲೀಕರನ್ನು ಚಿಂತೆಗೀಡು ಮಾಡಿತ್ತು.

ಇಲ್ಲಿನ ಮ್ಯಾಕ್ಸ್ ಪೆಟ್‌ಜೆಡ್ ಆಸ್ಪತ್ರೆಗೆ ಆ ಶ್ವಾನವನ್ನು ಮಾಲೀಕರು ಕರೆತಂದಿದ್ದು, ಪ್ರಾಣಿಗಳ ಹೃದ್ರೋಗ ತಜ್ಞರಾದ ಡಾ.ಭಾನು ದೇವ್​​ಶರ್ಮಾ ಅವರು ತಪಾಸಣೆ ನಡೆಸಿದ್ದಾರೆ. ಕಠಿಣ ಮತ್ತು ತೀರಾ ಸಂಕೀರ್ಣ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಬಗ್ಗೆ ಅವರು ಮಾಲೀಕರ ಜೊತೆ ಮಾತನಾಡಿದ್ದಾರೆ. ಅದರಂತೆ ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.

ಶ್ವಾನವನ್ನು ಪಶು ವೈದ್ಯರು ತಪಾಸಣೆ ನಡೆಸಿ ಟ್ರಾನ್ಸ್‌ಕ್ಯಾಥೆಟರ್ ಎಡ್ಜ್ ಟು ಎಡ್ಜ್ ರಿಪೇರಿ (TEER) ವಿಧಾನದ ಮೂಲಕ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.

Ad
Ad
Nk Channel Final 21 09 2023
Ad