Bengaluru 28°C
Ad

ಇವರು ಪವನ ಅಲ್ಲ ಬಿರುಗಾಳಿ: ಪವನ್ ಕಲ್ಯಾಣ್ ಅವರನ್ನು ಹೊಗಳಿದ ಪ್ರಧಾನಿ ಮೋದಿ

ಪವನ್ ಕಲ್ಯಾಣ್  ಅವರ ಜನಸೇನಾ ಪಕ್ಷ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸ್ಪರ್ಧಿಸಿದ 17 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಅವರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಸಿಕ್ಕ ಎರಡೂ ಕ್ಷೇತ್ರದಲ್ಲಿ ಅವರ ಪಕ್ಷ ಗೆಲುವು ಕಂಡಿದೆ. 

ಆಂಧ್ರ ಪ್ರದೇಶ: ಪವನ್ ಕಲ್ಯಾಣ್  ಅವರ ಜನಸೇನಾ ಪಕ್ಷ ಆಂಧ್ರ ಪ್ರದೇಶ ವಿಧಾನಸಭೆಯಲ್ಲಿ ಸ್ಪರ್ಧಿಸಿದ 17 ಕ್ಷೇತ್ರಗಳಲ್ಲಿ 17 ಕ್ಷೇತ್ರಗಳನ್ನು ಅವರು ಗೆದ್ದಿದ್ದಾರೆ. ಲೋಕಸಭೆಯಲ್ಲಿ ಸಿಕ್ಕ ಎರಡೂ ಕ್ಷೇತ್ರದಲ್ಲಿ ಅವರ ಪಕ್ಷ ಗೆಲುವು ಕಂಡಿದೆ.

ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಎನ್​​ಡಿಎ ಸಭೆಯಲ್ಲಿ ಮೋದಿ ಅವರು ಪವನ್ ಕಲ್ಯಾಣ್ ಅವರನ್ನು ಹೊಗಳಿದ್ದಾರೆ.

ಪವನ್ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದು,  ಪವನ ಎಂದರೆ ಗಾಳಿ ಎಂಬರ್ಥ ಇದೆ. ‘ಇವರು ಪವನ (ಗಾಳಿ) ಅಲ್ಲ ಬಿರುಗಾಳಿ’ ಎಂದು ಪವನ್​ ಅವರನ್ನು ಹೊಗಳಿದ್ದಾರೆ ಮೋದಿ.

ಪವನ್ ಕಲ್ಯಾಣ್ ಅವರು ಮೋದಿ ಅವರ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ‘ಜನಸೇನಾ ಪರವಾಗಿ ನನ್ನ ಧನ್ಯವಾದ. ಇಲ್ಲಿಗೆ ಬರೋಕೆ ಅವಕಾಶ ನೀಡಿದ್ದಕ್ಕೆ ಧನ್ಯವಾದ. 2014ರಲ್ಲಿ ಇಲ್ಲಿಂದಲೇ ಆರಂಭ ಆಗಿತ್ತು. 15 ವರ್ಷ ಪ್ರಧಾನಿ ನಮ್ಮ ದೇಶದಲ್ಲಿ ಪ್ರಧಾನಿ ಆಗಿರಬೇಕು ಎಂದು ನಾನು ಹಾಗೂ ಚಂದ್ರಬಾಬು ನಾಯ್ಡು ಮಾತನಾಡಿಕೊಂಡಿದ್ದೆವು. ಅದು ಸಂಭವಿಸುತ್ತಿದೆ. ನೀವು ಇಡೀ ದೇಶಕ್ಕೆ ಸ್ಫೂರ್ತಿ’ ಎಂದು ಮೋದಿ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು ಪವನ್.

Ad
Ad
Nk Channel Final 21 09 2023
Ad