Bengaluru 16°C

ಯುವಕನ ಕಿರುಕುಳಕ್ಕೆ ಹೆದರಿ ಕುತ್ತಿಗೆಗೆ ಇರಿದುಕೊಂಡು ಸಾಯಲೆತ್ನಿಸಿದ ಬಾಲಕಿ

ಇತ್ತೀಚೆಗೆ ಪ್ರತಿ ದಿನ ಕಾಮಿಗಳ ಕಿರುಕುಳ , ಅವರು ಮಾಡುವ ದೌರ್ಜನ್ಯ ಕುರಿತೇ ಸುದ್ದಿಗಳು ಹರಿದಾಡುತ್ತಿವೆ. ಸಂತ್ರಸ್ಥರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರು ಆದರು ದೇಶದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.  ಹೆಣ್ಣಿನ ಮೇಲಿನ ದೌರ್ಜನ ಮುಂದುವರೆದಿದೆ. ಇದೀಗ ಅಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ.

ಇತ್ತೀಚೆಗೆ ಪ್ರತಿ ದಿನ ಕಾಮಿಗಳ ಕಿರುಕುಳ , ಅವರು ಮಾಡುವ ದೌರ್ಜನ್ಯ ಕುರಿತೇ ಸುದ್ದಿಗಳು ಹರಿದಾಡುತ್ತಿವೆ. ಸಂತ್ರಸ್ಥರು ನ್ಯಾಯಕ್ಕಾಗಿ ಹೋರಾಡುತ್ತಿದ್ದಾರು ಆದರು ದೇಶದಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ.  ಹೆಣ್ಣಿನ ಮೇಲಿನ ದೌರ್ಜನ ಮುಂದುವರೆದಿದೆ. ಇದೀಗ ಅಂತಹದೊಂದು ಘಟನೆ ಮಧ್ಯಪ್ರದೇಶದಲ್ಲಿ ನಡೆದಿರುವುದಾಗಿ ತಿಳಿದು ಬಂದಿದೆ. ಆಗಸ್ಟ್ 13ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಸೆಮಾರಿಯಾ ಪಟ್ಟಣದಲ್ಲಿ ವ್ಯಕ್ತಿಯೊಬ್ಬನಿಂದ ಪದೇಪದೇ ಕಿರುಕುಳಕ್ಕೆ. ಒಳಗಾದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹಾಡಹಗಲೇ ಕುತ್ತಿಗೆಗೆ ಅನೇಕ ಬಾರಿ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಪಟ್ಟ ಆಘಾತಕಾರಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.


ಸಿರಾಜ್ ಅಹ್ಮದ್ ಎಂಬ ವ್ಯಕ್ತಿ ಪದೇಪದೇ ಅಪ್ರಾಪ್ತ ಬಾಲಕಿಯನ್ನು ಹಿಂಬಾಲಿಸುವುದಲ್ಲದೇ ಆಕೆಗೆ ಬೆದರಿಕೆಯೊಡ್ಡುತ್ತಿದ್ದನು. ಇದರಿಂದ ಹೆದರಿದ ಯುವತಿ ಅತ್ಮಹತ್ಯೆಗೆ ಯತ್ನಿಸಿದ್ದಾಳೆ. ವಿಡಿಯೋದಲ್ಲಿ ಚಮ್ಮಾರನ ಸಂಗಡಿಗೆ ಬಂದ ಬಾಲಕಿ ಅಲ್ಲಿದ್ದ ಚಾಕು ಹಿಡಿದುಕೊಂಡು ಅನೇಕ ಬಾರಿ ಕುತ್ತಿಗೆಗೆ ಚುಚ್ಚಿಕೊಂಡಿದ್ದಾಳೆ. ಪಕ್ಕದಲ್ಲಿದ್ದ ಸ್ನೇಹಿತೆ ತಡೆಯಲು ಯತ್ನಿಸಿದ್ದರು ಕೇಳದೆ ಚಾಕುವಿನಿಂದ ಚುಚ್ಚಿಕೊಂಡಿದ್ದಾಳೆ.


 

Nk Channel Final 21 09 2023