ವಿದೇಶಿಗರು ನಮ್ಮ ಭಾಷೆಯನ್ನು ಮಾತಾಡಿದ್ರೆ ಅಥವಾ ನಮ್ಮ ಸಂಸ್ಕೃತಿಯ ಪ್ರಕಾರ ಬಟ್ಟೆಯನ್ನು ತೊಟ್ಟುಕೊಂಡರೆ ಅಥವಾ ನಮ್ಮ ಹಾಡುಗಳನ್ನು ಹಾಡಿದ್ರೆ ಅದನ್ನೂ ನೋಡೋಕೆ ತುಂಬಾ ಖುಷಿ ಎನಿಸುತ್ತದೆ. ಹೌದು. .. ಇದೀಗ ವಿದೇಶಿಗರ ಸುಂದರ ವಿಡಿಯೋವೊಂದು ವೈರಲ್ ಆಗಿದ್ದು, ಯುವತಿಯರಿಬ್ಬರು ವಿದೇಶಿ ನೆಲದಲ್ಲಿ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪಾ… ಮತದಲ್ಲಿ ಮೇಲ್ಯಾವುದೋ ಎಂಬ ಕನ್ನಡ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
ಕಳೆದ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿನ ವಿಡಿಯೋ ಇದಾಗಿದ್ದು, ಕಳೆದ ವರ್ಷ ಜರ್ಮನಿಯ ಬರ್ಲಿನ್‌ನಲ್ಲಿ ʼಬರ್ಲಿನ್ ಕನ್ನಡ ಬಳಗʼವು ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜರ್ಮನಿಯ ಜೆನ್ನಿಫರ್ ಹಾಗೂ ನೊಟಯ ಎಂಬ ಯುವತಿಯರು ಡಾ. ರಾಜ್‌ಕುಮಾರ್ ನಟನೆಯ ʼಸತ್ಯ ಹರಿಶ್ಚಂದ್ರʼ ಸಿನಿಮಾದ ಕುಲದಲ್ಲಿ ಕೀಳ್ಯಾವುದೋ… ಹಾಡಿಗೆ ನೃತ್ಯ ಮಾಡಿದ್ದಾರೆ. ಇದೀಗ ಮತ್ತೊಮ್ಮೆ ಈ ವಿಡಿಯೋ ವೈರಲ್ ಆಗುತ್ತಿದೆ.ಈ ಕುರಿತ ಪೋಸ್ಟ್ ಒಂದನ್ನು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ಥ್ರೆಡ್ ಅಲ್ಲಿ ಅಹಮದ್ ಶರೀಫ್ (1whopraises) ಎಂಬವರು ಹಂಚಿಕೊಂಡಿದ್ದಾರೆ.