Bengaluru 24°C
Ad

ಸಮೋಸಾದಲ್ಲಿ ಕಪ್ಪೆ ಕಾಲು ಪತ್ತೆ , ಬೆಚ್ಚಿಬಿದ್ದ ಗ್ರಾಹಕ : ವಿಡಿಯೋ ವೈರಲ್‌

ಗಾಜಿಯಾಬಾದ್‌ನ ಅಭಯ್ ಖಾಂಡ್‌ನಲ್ಲಿರುವ ಸ್ವೀಟ್ ಅಂಗಡಿಯೊಂದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇದಕ್ಕೆ ಕಾರಣ ಸ್ವೀಟ್ ಅಂಗಡಿಯಲ್ಲಿದ್ದ ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆಯಾಗಿರುವುದು.

ನವದೆಹಲಿ: ಗಾಜಿಯಾಬಾದ್‌ನ ಅಭಯ್ ಖಾಂಡ್‌ನಲ್ಲಿರುವ ಸ್ವೀಟ್ ಅಂಗಡಿಯೊಂದರ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಇದಕ್ಕೆ ಕಾರಣ ಸ್ವೀಟ್ ಅಂಗಡಿಯಲ್ಲಿದ್ದ ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆಯಾಗಿರುವುದು.

ಹೌದು ಅಭಯ್ ಖಾಂಡ್‌ನಲ್ಲಿರುವ ಸ್ವೀಟ್ ಅಂಗಡಿಯೊಂದಕ್ಕೆ ಮೂವರು ವ್ಯಕ್ತಿಗಳು ಬಂದು ಸಮೋಸಾ ಪಡೆದುಕೊಂಡಿದ್ದಾರೆ ಇದಾದ ಬಳಿಕ ಓರ್ವನ ಸಮೋಸಾದಲ್ಲಿ ಕಪ್ಪೆಯ ಕಾಲು ಪತ್ತೆಯಾಗಿದೆ ಇದರಿಂದ ಗಾಬರಿಗೊಂಡ ಗ್ರಾಹಕ ಅಂಗಡಿ ಸಿಬ್ಬಂದಿಯ ಬಳಿ ಸಮೋಸಾ ನೀಡಿ ಸಿಡಿಮಿಡಿಗೊಂಡಿದ್ದಾನೆ ಇದನ್ನು ಕಂಡ ಅಂಗಡಿಯ ಸಿಬ್ಬಂದಿ ಪರಿಶೀಲನೆ ನಡೆಸುವುದಾಗಿ ಹೇಳಿದ್ದಾನೆ ಆದರೆ ಇಷ್ಟಕ್ಕೂ ಸುಮ್ಮನಾಗದ ಗ್ರಾಹಕ ಸಮೋಸಾದಲ್ಲಿರುವ ಪತ್ತೆಯಾದ ಕಪ್ಪೆಯ ವಿಡಿಯೋ ಅನ್ನಿ ಮೊಬೈಲ್ ನಲ್ಲಿ ಚಿತ್ರೀಕರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇಷ್ಟಕ್ಕೆ ಸುಮ್ಮನಾಗದ ಗ್ರಾಹಕ ಅಂಗಡಿಯವನ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸಿದ್ದಾನೆ. ಪೊಲೀಸರು ಆಹಾರ ಇಲಾಕೆಗೂ ಮಾಹಿತಿ ನೀಡಿದ್ದು ಆಹಾರ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸಮೋಸಾದ ಮಾದರಿಯನ್ನು ಪರೀಕ್ಷೆಗೆ ಕೊಂಡೊಯ್ದಿದ್ದಾರೆ.

 

Ad
Ad
Nk Channel Final 21 09 2023