Ad

ಅಂತ್ಯಕ್ರಿಯೆಯ ಮಧ್ಯೆ ಫುಟ್ಬಾಲ್‌ ಮ್ಯಾಚ್ ವೀಕ್ಷಿಸಿದ ಕುಟುಂಬಸ್ಥರು: ವಿಡಿಯೋ ವೈರಲ್‌

ಕಳೆದ ಎರಡು ದಿನಗಳ ಹಿಂದೆ ಚಿಲಿ ವರ್ಸಸ್ ಪೆರು ಮಧ್ಯೆ ಫುಟ್ಬಾಲ್ ಪಂದ್ಯ ನಿಗದಿಯಾಗಿತ್ತು. ಮ್ಯಾಚ್ ನಡೆಯುತ್ತಿದ್ದ ದಿನವೇ ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

ಕಳೆದ ಎರಡು ದಿನಗಳ ಹಿಂದೆ ಚಿಲಿ ವರ್ಸಸ್ ಪೆರು ಮಧ್ಯೆ ಫುಟ್ಬಾಲ್ ಪಂದ್ಯ ನಿಗದಿಯಾಗಿತ್ತು. ಮ್ಯಾಚ್ ನಡೆಯುತ್ತಿದ್ದ ದಿನವೇ ದಕ್ಷಿಣ ಅಮೆರಿಕಾದ ಚಿಲಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದರು.

Ad
300x250 2

ಈ ವೇಳೆ ಅಂತ್ಯಸಂಸ್ಕಾರಕ್ಕೆ ಕುಟುಂಬಸ್ಥರ ಸಕಲ ಸಿದ್ಧತೆಯನ್ನು ಮಾಡಿಕೊಂಡಿದ್ದರು. ಆದರೆ ಅದೇ ಸಮಯಕ್ಕೆ ಸರಿಯಾಗಿ ರೋಚಕ ಫುಟ್ಬಾಲ್ ಮ್ಯಾಚ್ ಕಣ್ಣಿಗೆ ಬಿದ್ದು, ಅಂತ್ಯಕ್ರಿಯೆಯ ವಿಧಿ ವಿಧಾನಕ್ಕೆ ಬ್ರೇಕ್ ಹಾಕಲಾಗಿದೆ.

ವ್ಯಕ್ತಿಯೊಬ್ಬರ ಅಂತ್ಯಕ್ರಿಯೆ ನಡೆಯುವ ಪ್ರಾರ್ಥನಾ ಮಂದಿರದಲ್ಲಿ ಬಿಗ್ ಸ್ಕ್ರೀನ್ ಟಿವಿ ಅಳವಡಿಸಲಾಗಿದೆ. ಮೃತದೇಹ ಪಕ್ಕದಲ್ಲಿದ್ದರೂ ಕುಟುಂಬದ ಸದಸ್ಯರು ಫುಟ್ಬಾಲ್ ಮ್ಯಾಚ್ ವೀಕ್ಷಿಸಿದ್ದಾರೆ. ಅಷ್ಟೇ ಅಲ್ಲ ಮೃತದೇಹದ ಪೆಟ್ಟಿಗೆಗೆ ಫುಟ್ಬಾಲ್ ಆಟಗಾರರ ಜೆರ್ಸಿ ಹಾಕಿ ಗುಡ್‌ಲಕ್ ಹೇಳಿದ್ದಾರೆ.

ಅಂತ್ಯಕ್ರಿಯೆಯ ಮಧ್ಯೆಯೇ ಕುಟುಂಬ ಸದಸ್ಯರು ಫುಟ್ಬಾಲ್ ಮ್ಯಾಚ್‌ ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಶಾಕ್ ಆಗಿದ್ದು, ಸಾಕಷ್ಟು ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ. ಶವದ ಪೆಟ್ಟಿಗೆಯ ಪಕ್ಕದಲ್ಲೇ ಕುಳಿತು ಫುಟ್ಬಾಲ್ ಮ್ಯಾಚ್‌ ನೋಡುತ್ತಾ ಎಂಜಾಯ್ ಮಾಡಿರೋದು ಹಲವರ ಅಚ್ಚರಿಗೂ ಕಾರಣವಾಗಿದೆ.

https://x.com/TomValentinoo/status/1804854550186139952?

Ad
Ad
Nk Channel Final 21 09 2023
Ad