ಮುಂಬೈ: ಕುಡಿತದ ಚಟದಿಂದಲೇ ತನ್ನ ಸುಂದರ ವೃತ್ತಿಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿಕೊಂಡ ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಅವರ ಇನ್ನೊಂದು ವಿಡಿಯೋ ವೈರಲ್ ಆಗಿದೆ.
ಇತ್ತೀಚಿನ ವರ್ಷಗಳಲ್ಲಿ ಕೆಟ್ಟ ಕಾರಣಕ್ಕಾಗಿಯೇ ವಿನೋದ್ ಕಾಂಬ್ಳಿ ಮೀಡಿಯಾದಲ್ಲಿ ಸುದ್ದಿಯಲ್ಲಿರುತ್ತಾರೆ. ಒಂದು ಕಾಲದಲ್ಲಿ ಸಚಿನ್‌ರಷ್ಟೇ ಪ್ರತಿಭಾವಂತನಾಗಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಬದುಕನ್ನು ಮದ್ಯಪಾನ ಸರ್ವನಾಶ ಮಾಡಿದೆ ಅನ್ನೋದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ವೈರಲ್ ಆಗಿದೆ. ವಿಡಿಯೋದಲ್ಲಿ ಫುಲ್ ಟೈಟ್ ಆಗಿರುವ ವಿನೋದ್ ಕಾಂಬ್ಳಿಗೆ ರಸ್ತೆಯ ಮೇಲೆ ಸ್ವಂತ ಬಲದಲ್ಲಿ ನಿಲ್ಲೋಕೆ ಕೂಡ ಸಾಧ್ಯವಾಗುತ್ತಿಲ್ಲ.
ತೂರಾಡುತ್ತಿದ್ದ ವಿನೋದ್ ಕಾಂಬ್ಳಿ ಬೈಕ್‌ಅನ್ನು ಹಿಡಿದುಕೊಂಡು ನಿಲ್ಲುವ ಪ್ರಯತ್ನ ಮಾಡುತ್ತಿದ್ದರು. ಕೊನೆಯಲ್ಲಿ, ಅಲ್ಲಿಯೇ ಇದ್ದ ಪಾದಾಚಾರಿಗಳು 52 ವರ್ಷ ವಯಸ್ಸಿನ ಮಾಜಿ ಕ್ರಿಕೆಟಿಗ ಹೋಗಬೇಕಾದ ಸ್ಥಳಕ್ಕೆ ತಲುಪಲು ಸಹಾಯ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಹಲವು ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ವೈರಲ್ ಆಗಿದೆ.
It's really sad what ALCOHOL can do to you. This is former Indian cricketer Vinod Kambli’s state as he's escorted off his two wheeler by onlookers to safety. 🥃☠️❌ pic.twitter.com/ibBUlDOT3k
— PRASHANT KESHWAIN 🏏 (@pkeshwain) August 5, 2024