Bengaluru 21°C
Ad

ಊಟ ಕೊಡಲಿಲ್ಲವೆಂದು ರೆಸ್ಟೋರೆಂಟ್‌ಗೆ ಟ್ರಕ್‌ ನುಗ್ಗಿಸಿದ ಚಾಲಕ : ವಿಡಿಯೋ ವೈರಲ್

ಊಟ ಕೊಡಲು ನಿರಾಕರಿಸಿದ್ದಕ್ಕೆ ಕಂಠ ಪೂರ್ತಿ ಕುಡಿದಿದ್ದ ಟ್ರಕ್‌ ಡ್ರೈವರ್‌, ಕೋಪದಲ್ಲಿ ತನ್ನ ಟ್ರಕ್‌ ಅನ್ನು ರೆಸ್ಟೋರೆಂಟ್‌ಗೆ ನುಗ್ಗಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಊಟ ಕೊಡಲು ನಿರಾಕರಿಸಿದ್ದಕ್ಕೆ ಕಂಠ ಪೂರ್ತಿ ಕುಡಿದಿದ್ದ ಟ್ರಕ್‌ ಡ್ರೈವರ್‌, ಕೋಪದಲ್ಲಿ ತನ್ನ ಟ್ರಕ್‌ ಅನ್ನು ರೆಸ್ಟೋರೆಂಟ್‌ಗೆ ನುಗ್ಗಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಇಲ್ಲೊಬ್ಬ ಡ್ರೈವರ್‌ ಊಟ ಕೊಡಲು ನಿರಾಕರಿಸಿದ ರೆಸ್ಟೋರೆಂಟಿಗೆ ಟ್ರಕ್‌ ನುಗ್ಗಿಸಿದ್ದಾನೆ. ಈ ಡ್ರೈವರ್‌ ಸೊಲ್ಲಾಪುರದಿಂದ ಪುಣೆಗೆ ಹೋಗುವ ಮಾರ್ಗದಲ್ಲಿ ಗೋಕುಲ್‌ ರೆಸ್ಟೋರೆಂಟ್‌ ಅಲ್ಲಿ ಊಟ ಮಾಡಲು ಟ್ರಕ್‌ ನಿಲ್ಲಿಸಿದ್ದಾನೆ. ಮತ್ತು ರೆಸ್ಟೋರೆಂಟಿಗೆ ಪ್ರವೇಶಿಸಿದಾಗ ಮಾಲೀಕರು ಊಟ ಕೊಡಲು ನಿರಾಕರಿಸಿದ್ದಾರೆ. ಮೊದಲೇ ಕುಡಿದ ಅಮಲಿನಲ್ಲಿದ್ದ ಆತ ಇದರಿಂದ ಕೋಪಗೊಂಡು ತನ್ನ ಟ್ರಕ್‌ ಅನ್ನೇ ರೆಸ್ಟೋರೆಂಟ್‌ ಒಳಗೆ ನುಗ್ಗಿಸಿದ್ದಾನೆ. ಈ ಬಗ್ಗೆ ಯಾರೋ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

Ad
Ad
Nk Channel Final 21 09 2023