ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಸಿದ್ದ ನಟರಾದ ಸುದೀಪ್ ಮತ್ತು ದರ್ಶನ್ ಅವರು ದೇಶದಲ್ಲೆಡೆ ಹೆಚ್ಚಿನ ಫ್ಯಾನ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಆದರೆ ಇದೀಗ ಡಾ.ಬ್ರೋ ಎಂದೇ ಜನಪ್ರಿಯವಾಗಿರುವ ಗಗನ್ ಶ್ರೀನಿವಾಸ್ ಸದ್ದಿಲ್ಲದೆ ಇನ್ಸ್‌ಟಾಗ್ರಾಮ್‌ನಲ್ಲಿ ಸದ್ದಿಲ್ಲದೆ, ಡಾ. ಬ್ರೋ ಇವರಿಬ್ಬರನ್ನೂ ಹಿಂದಿಕ್ಕಿದ್ದಾರೆ. ವಿದೇಶಗಳಲ್ಲಿ ಸುತ್ತಾಟ ಮಾಡುತ್ತಾ ಅಲ್ಲಿನ ಆಚಾರ ವಿಚಾರ ಪದ್ದತಿಗಳ ಬಗ್ಗೆ ಕನ್ನಡಿಗರಿಗೆ ಅವರದೇ ಭಾಷೆಯಲ್ಲಿ ಅತ್ಯಂತ ಲೋಕಲ್ ಆಗಿ ತಿಳಿಸಿಕೊಡುವ ಡಾ. ಬ್ರೋ ಕನ್ನಡದ ಇಬ್ಬರು ಸೂಪರ್‌ಸ್ಟಾರ್‌ಗಳನ್ನು ಹಿಂದಿಕ್ಕಿದ್ದಾರೆ. ಕೆಲವು ಸೋಶಿಯಲ್ ಮೀಡಿಯಾ ಪೇಜ್‌ಗಳು ಈ ವಿಚಾರವಾಗಿ ಡಾ. ಬ್ರೋಗೆ ಅಭಿನಂದನೆಗಳನ್ನೂ ಸಲ್ಲಿಸಿವೆ. ಇತ್ತೀಚೆಗೆ ಲೆಬನಾನ್ ದೇಶದ ಪ್ರವಾಸಕ್ಕೆ ಹೋಗಿದ್ದ ಡಾ. ಬ್ರೋ ಈ ಕುರಿತಾದ ವಿಡಿಯೋಗಳನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಸೋಶಿಯಲ್ ಮೀಡಿಯಾದಲ್ಲಿ 203 ಪೋಸ್ಟ್‌ಗಳನ್ನು ಹಂಚಿಕೊಂಡಿರುವ ಡಾ. ಬ್ರೋಗೆ 2.7 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಇನ್ನು ಕಿಚ್ಚ ಸುದೀಪ್ ಇನ್ಸ್‌ಟಾಗ್ರಾಮ್‌ನಲ್ಲಿ 401 ಪೋಸ್ಟ್‌ಗಳನ್ನು ಹಂಚಿಕೊಂಡಿದ್ದು, 2.3 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಕಾಟೇರ ಸಿನಿಮಾದ ಮೂಲಕ ಯಶಸ್ಸು ಕಂಡಿರುವ ದರ್ಶನ್ ತೂಗುದೀಪ 505 ಪೋಸ್ಟ್‌ಗಳನ್ನು ಇನ್ಸ್‌ಗ್ರಾಮ್‌ನಲ್ಲಿ ಹಂಚಿಕೊಂಡಿದ್ದು 2.1 ಮಿಲಿಯನ್ ಫಾಲೋವರ್‌ಗಳನ್ನು ಹೊಂದಿದ್ದಾರೆ. ಆ ಮೂಲಕ ಇನ್ಸ್‌ಟಾಗ್ರಾಮ್‌ನಲ್ಲಿ ಗರಿಷ್ಠ ಫಾಲೋವರ್ಸ್‌ಗಳನ್ನು ಹೊಂದಿರುವ ಲಿಸ್ಟ್‌ನಲ್ಲಿ ಡಾ ಬ್ರೋ ದರ್ಶನ್ ಹಾಗೂ ಸುದೀಪ್ ಅವರನ್ನೇ ಹಿಂದಿಕ್ಕಿದ್ದಾರೆ.