ಹಲ್ಲು ನೋವು , ತಡೆಯಲಾರದ ಯಾತನೆ ನೀಡುತ್ತದೆ. ಕಣ್ಣಿಗೆ ಕಾಣದ, ಅನುಭವಿಸಲಾಗದ ನೋವುಗಳಲ್ಲಿ ಇದೂ ಒಂದು. ಹಲ್ಲಿನಲ್ಲಿ ನೋವು ಕಾಣಿಸಿಕೊಳ್ತಿದ್ದಂತೆ ಜನರು ವೈದ್ಯರ ಬಳಿ ಓಡ್ತಾರೆ. ಹುಳು ತಿಂದಿರುವ ಹಲ್ಲನ್ನು ವೈದ್ಯರು ಕಿತ್ತು ಕೈಗೆ ಕೊಡ್ತಾರೆ. ನೋವು ಬೇಗ ಕಡಿಮೆ ಆಗ್ಬೇಕು ಎನ್ನವು ಆತುರದಲ್ಲಿ ಕೆಲವರು ಹೊಸ ಚಿಕಿತ್ಸೆಗಳಿಗೆ ಒಪ್ಪಿಕೊಳ್ತಾರೆ. ಇನ್ಮುಂದೆ ಹಲ್ಲಿನ ಆಸ್ಪತ್ರೆಗೆ ಹೋದಾಗ ಸ್ವಲ್ಪ ಎಚ್ಚರದಲ್ಲಿರಿ. ಯಾಕೆಂದ್ರೆ ಚೀನಾದಲ್ಲಿ ವ್ಯಕ್ತಿಯೊಬ್ಬ 23 ಹಲ್ಲನ್ನು ಒಂದೇ ದಿನ ಕಿತ್ಕೊಂಡು ಈಗ ಇಹಲೋಕ ತ್ಯಜಿಸಿದ್ದಾನೆ. ಆತನ ಹಲ್ಲಿನ ಚಿಕಿತ್ಸೆಯೇ ಸಾವಿಗೆ ಕಾರಣವಾಗಿದೆ ಎನ್ನುವ ಅನುಮಾನ ದಟ್ಟವಾಗಿದೆ.
ಶಸ್ತ್ರಚಿಕಿತ್ಸೆ ನಡೆಸಿದ ದಂತ ವೈದ್ಯ ಐದು ವರ್ಷಗಳ ಸೇವೆಯಲ್ಲಿ ಅನುಭವ ಹೊಂದಿದ್ದು, ರೂಟ್ ಕೆನಾಲ್ ಚಿಕಿತ್ಸೆ ಸೇರಿದಂತೆ ಇತರ ಹಲ್ಲಿನ ಚಿಕಿತ್ಸೆಗಳಲ್ಲಿ ಹೆಚ್ಚು ನುರಿತ ಎಂದು ತಿಳಿದುಬಂದಿದೆ. ಆದರೆ ಹಲ್ಲಿನ ಚಿಕಿತ್ಸೆ ಮತ್ತು ಹುವಾಂಗ್ ಸಾವಿನ ನಡುವೆ 13 ದಿನಗಳ ಅಂತರವಿರುವುದರಿಂದ ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣವನ್ನು ಇನ್ನೂ ಆಳವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಆಯೋಗ ಹೇಳಿದೆ.