ಉಡುಪಿ: ಯುವಜನತೆಗೆ ಚೇಂಜಸ್ ಬೇಕು. ಮಾಡಿದ್ದನ್ನೇ ಮಾಡಿದ್ರೆ ಬೋರ್ ಆಗ್ತದೆ. ಹಾಗಾಗಿ ಮದುವೆ ದಿಬ್ಬಣಗಳಲ್ಲಿ ವೈವಿಧ್ಯತೆ ಇರುತ್ತೆ. ಉಡುಪಿಯ ದೊಡ್ಡಣಗುಡ್ಡೆಯಲ್ಲಿ ಯುವಕನೊಬ್ಬನ ಮದುವೆ ದಿಬ್ಬಣವನ್ನು ಆತನ ಗೆಳೆಯರು ಸ್ಮರಣೀಯಗೊಳಿಸಿದ್ದಾರೆ.
ಟ್ರ್ಯಾಕ್ಟರ್ ನಲ್ಲಿ ಮದುಮಗ ಮದುಮಗಳು ಆಸೀನರಾಗಿದ್ದರು.ಹಿಂದೆ ಮುಂದೆ ಸ್ನೇಹಿತರು ಮತ್ತು ಗೆಳೆಯರಿದ್ದರು.ಟ್ರ್ಯಾಕ್ಟರ್ ಗೆ ವಿವಿಧ ಎಲೆಗಳಿಂದ ಸಿಂಗಾರ ಮಾಡಲಾಗಿತ್ತು. ಆದರೆ ಎಲ್ಲರ ಗಮನ ಸೆಳೆದದ್ದು ಮಾತ್ರ , ಖಾಲಿ ಬಿಯರ್ ಟಿನ್ ಗಳ ಸಿಂಗಾರ.
ಟ್ರ್ಯಾಕ್ಟರ್ ನ ಸುತ್ತ ಖಾಲಿ ಬಿಯರ್ ಟಿನ್ ಗಳನ್ನು ನೇತು ಹಾಕಲಾಗಿತ್ತು. ಹಿಂಭಾದಲ್ಲಿ ಖಾಲಿ ರಮ್ ನ ಪೊಟ್ಟಣಗಳನ್ನು ನೇತು ಹಾಕಲಾಗಿತ್ತು. ಇದು ನೋಡುಗರ ಗಮನ ಸೆಳೆಯಿತು. ದಿಬ್ಬಣದುದ್ದಕ್ಕೂ ಕುಣಿತ , ಡೋಲು ನೆರೆದವರ ಮನ ರಂಜಿಸಿತು.