Ad

ನಕಲಿ ಕಳ್ಳಬಟ್ಟಿ : ಕಲ್ಲಕುರಿಚಿಯಲ್ಲಿ ಸಾವಿನ ಸಂಖ್ಯೆ 55 ಕ್ಕೆ ಏರಿಕೆ

ನಕಲಿ ಕಳ್ಳಬಟ್ಟಿ ಕುಡಿದವರಲ್ಲಿ ದಿನದಿನಕ್ಕು ಸಾವಿನ ಸಂಖ್ಯೆ ಏರುತ್ತಲೆ ಹೋಗುತ್ತಿದೆ.ಆದರೆ ಅಕ್ರಮ ಮದ್ಯ ಸೇವಿಸಿದ 100 ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಿಲ್ಲುಪುರಂ : ನಕಲಿ ಕಳ್ಳಬಟ್ಟಿ ಕುಡಿದವರಲ್ಲಿ ದಿನದಿನಕ್ಕು ಸಾವಿನ ಸಂಖ್ಯೆ ಏರುತ್ತಲೆ ಹೋಗುತ್ತಿದೆ.ಆದರೆ ಅಕ್ರಮ ಮದ್ಯ ಸೇವಿಸಿದ 100 ಕ್ಕೂ ಹೆಚ್ಚು ಜನರು ಇನ್ನೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಲ್ಲುಪುರಂ ಜಿಲ್ಲೆಯ ಕಲ್ಲಕುರಿಚಿಯ ಸುಮಾರು 200 ಜನರನ್ನು ಬುಧವಾರ ಕಳ್ಳಭಟ್ಟಿ ಸೇವಿಸಿದ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ವಶಪಡಿಸಿಕೊಂಡ 200 ಲೀಟರ್ ಕಳ್ಳಭಟ್ಟಿಯಲ್ಲಿ ಮಾರಣಾಂತಿಕ ಮೆಥನಾಲ್ ಇದೆ ಎಂದು ಪರೀಕ್ಷೆಗಳಿಂದ ಬಹಿರಂಗವಾಗಿದೆ.

Ad
300x250 2

ಏತನ್ಮಧ್ಯೆ, ಕಲ್ಲಕುರಿಚಿ ಕಳ್ಳಭಟ್ಟಿ ದುರಂತ ಪ್ರಕರಣದಲ್ಲಿ ನಿಷೇಧ ಮತ್ತು ಜಾರಿ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಮಹೇಶ್ ಕುಮಾರ್, ಐಪಿಎಸ್ ಅವರನ್ನು ವಜಾಗೊಳಿಸಲಾಗಿದ್ದು ಕಾನೂನು ಮತ್ತು ಸುವ್ಯವಸ್ಥೆಗೆ ಜಾರಿ ಎಡಿಜಿಪಿ ಎ.ಅರುಣ್ ಅವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ.ಮೃತರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಹಾಗೂ ಚಿಕಿತ್ಸೆ ಪಡೆಯುತ್ತಿರುವವರಿಗೆ 50 ಸಾವಿರ ರೂಪಾಯಿ ಪರಿಹಾರವನ್ನು ಸಿಎಂ ಘೋಷಿಸಿದ್ದಾರೆ

 

Ad
Ad
Nk Channel Final 21 09 2023
Ad