Bengaluru 22°C
Ad

ದರ್ಶನ್ ಅಭಿಮಾನಿಯ ಹುಚ್ಚುತನ; ಮಗನಿಗೆ ಖೈದಿ ರೀತಿ ಡ್ರೆಸ್ ಹಾಕಿ ಫೋಟೋಶೂಟ್

Baby

ವೈರಲ್: ನಟ ದರ್ಶನ್ ಅಭಿಮಾನಿಗಳ ಹುಚ್ಚುತನ ಮಿತಿಮೀರಿದೆ. ದರ್ಶನ್ ಜೈಲು ಸೇರಿದಾಗಿನಿಂದಲೂ ಅವರು ಹತಾಶೆಗೊಂಡಿದ್ದಾರೆ. ಈ ನಡುವೆ ಇಲ್ಲೊಬ್ಬ ಅಭಿಮಾನಿ ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ್ದಾನೆ. ಈ ಫೋಟೋ ವೈರಲ್ ಆಗುತ್ತಿದೆ.

Ad
300x250 2

‘Brand of sandalhood dboss fans Mysore’ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಫೋಟೋ ಹಂಚಿಕೊಳ್ಳಲಾಗಿದೆ. ಒಂದು ವರ್ಷದ ಮಗವಿಗೆ ಖೈದಿ ರೀತಿಯ ಬಟ್ಟೆ ಹಾಕಿ ಪೋಟೋಶೂಟ್ ಮಾಡಿಸಲಾಗಿದೆ. ದರ್ಶನ್​ಗೆ ನೀಡಿರೋ ವಿಚಾರಾಣಧೀನ ಖೈದಿ ಸಂಖ್ಯೆಯನ್ನು ಮಗುವಿಗೆ ಹಾಕಲಾಗಿದೆ. ಕೈ ಕೋಳ ಮಾದರಿ ಕೂಡ ಇಡಲಾಗಿದೆ. ಅಲ್ಲಿಯೇ ‘ಜೈ ಡಿಬಾಸ್’ ಎಂದು ಬರೆಯಲಾಗಿದೆ. ಇದಕ್ಕೆ ದರ್ಶನ್ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಜನಸಾಮಾನ್ಯರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.

ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಏನು ಅರಿಯದ ಮಗುವನ್ನು ಖೈದಿ ಮಾಡಿದ್ದು ಎಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಚರ್ಚೆ ಆಗುತ್ತಿದೆ. ‘ಶಿಕ್ಷಣ ಮುಖ್ಯ’ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ‘ಇದು ಸರಿ ಅಲ್ಲ’ ಎಂದು ಬುದ್ಧಿವಾದ ಹೇಳಿದ್ದಾರೆ.

ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಫ್ಯಾನ್ಸ್ ಖೈದಿ ಸಂಖ್ಯೆಯನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ.

Ad
Ad
Nk Channel Final 21 09 2023
Ad