Bengaluru 22°C
Ad

ಪುರುಷರ ಒಳಉಡುಪು ಆರ್ಡರ್ ಮಾಡಿದ ವ್ಯಕ್ತಿಗೆ ಬಂತು ಬಿಕಿನಿ !

Viralpost (1)

ಇತ್ತೀಚಿನ ಕೆಲವು ವರ್ಷಗಳಲ್ಲಿ, ಜನರಲ್ಲಿ ಆನ್‌ಲೈನ್ ಶಾಪಿಂಗ್ ಕ್ರೇಜ್ ಸಾಕಷ್ಟು ಹೆಚ್ಚಾಗಿದೆ. ಆನ್‌ಲೈನ್ ಶಾಪಿಂಗ್‌ನಲ್ಲಿ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿರುವ ಪ್ರಸಂಗಗಳೂ ಇವೆ. ಇದೀಗ ಇಂತದ್ದೇ ಘಟನೆಯೊಂದು ನಡೆದಿದೆ.

ಪುರುಷರ ಒಳಉಡುಪು ಆರ್ಡರ್ ಮಾಡಿದ ವ್ಯಕ್ತಿಯೊಬ್ಬನಿಗೆ ಬಿಕಿನಿ ಡೆಲಿವರಿ ಆಗಿದ್ದು, ಬಿಕಿನಿ ಕಂಡು ಈತ ತಲೆ ಮೇಲೆ ಕೈ ಇಟ್ಟು ಕುಳಿತ್ತಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಿಸಿದ ಪೋಸ್ಟ್​​ ಸೋಶಿಯಲ್​ ಮೀಡಿಯಾಗಳಲ್ಲಿ ಭಾರೀ ವೈರಲ್​​ ಆಗುತ್ತಿದೆ.

​​​ದೆಹಲಿಯ ಪ್ರಿಯಾಂಶ್ ಎಂಬ ವ್ಯಕ್ತಿ ಇತ್ತೀಚಿಗಷ್ಟೇ ಬ್ಲಿಂಕಿಟ್ ಆಪ್ ಮೂಲಕ ಪುರುಷರ ಒಳಉಡುಪುಗಳನ್ನು ಆರ್ಡರ್​​ ಮಾಡಿದ್ದಾರೆ. ಅದರಂತೆ ಬ್ಲಿಂಕಿಟ್ ವೇಗದ ಸೇವೆ ನೀಡಲು ಹೋಗಿ ಎಡವಟ್ಟು ಮಾಡಿಕೊಂಡಿದೆ. ಪ್ರಿಯಾಂಶ್ ಪುರುಷರ ಒಳಉಡುಪು ಆರ್ಡರ್ ಮಾಡಿದರೆ ಬ್ಲಿಂಕಿಟ್ ಮಹಿಳೆಯರ ಬಿಕಿನಿಯನ್ನು ಡೆಲಿವರಿ ಮಾಡಿದೆ. ಇದನ್ನು ಕಂಡು ಶಾಕ್​ ಆದ ಪ್ರಿಯಾಂಶ್ ತಕ್ಷಣ ಬ್ಲಿಂಕಿಟ್ ಕಸ್ಟಮರ್​​ ಕೇರ್​ಗೆ ಕರೆಮಾಡಿ ದೂರು ನೀಡಿದ್ದಾರೆ. ಹಣ ರೀಫಂಡ್ ಮಾಡುವಂತೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡದ ಕಾರಣ, ಇವರು ತಮಗಾದ ಅನುಭವವನ್ನು ಸೋಶಿಯಲ್​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

Ad
Ad
Nk Channel Final 21 09 2023