Bengaluru 21°C
Ad

ಅಕ್ರಮ ಮದ್ಯ ನಾಶಪಡಿಸಲು ಮುಂದಾದ ಖಾಕಿ; ಇದ್ದಕ್ಕಿದ್ದಂತೆ ‘ಬಾಟಲ್’ ಎತ್ತಿಕೊಂಡು ಜನ ಎಸ್ಕೇಪ್

Viralpost

ಆಂಧ್ರಪ್ರದೇಶ: ಇಲ್ಲಿನ ಗುಂಟೂರಿನಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಪೊಲೀಸರು ವಶಪಡಿಸಿಕೊಂಡ ಮದ್ಯದ ಬಾಟಲಿಗಳನ್ನು ಧ್ವಂಸ ಮಾಡುತ್ತಿದ್ದಾಗ ಕುಡುಕರು ಅವುಗಳನ್ನು ಲೂಟಿ ಮಾಡಲು ಯತ್ನಿಸಿದ್ದಾರೆ.

ಬಾಟಲಿಗಳನ್ನು ದೋಚಿಕೊಂಡು ಓಡಲು ಮದ್ಯಪ್ರಿಯರು ಮುಂದಾದಾಗ ಅವರನ್ನು ಪೊಲೀಸರು ನಿಯಂತ್ರಿಸುವಾಗ ಪರಿಸ್ಥಿತಿ ಗೊಂದಲದ ಗೂಡಾಯಿತು.

ಏಟುಕೂರು ರಸ್ತೆಯ ಡಂಪಿಂಗ್ ಯಾರ್ಡ್‌ನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಅಂದಾಜು 50 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ವಿಲೇವಾರಿ ಮಾಡುತ್ತಿದ್ದರು. ಈ ವೇಳೆ ಹಲವು ಮಂದಿ ಬಾಟಲಿಗಳ ಕಡೆಗೆ ಧಾವಿಸಿ, ಅವುಗಳನ್ನು ಹಿಡಿದು ಸ್ಥಳದಿಂದ ಪರಾರಿಯಾದರು.

ಪೊಲೀಸ್ ಸಿಬ್ಬಂದಿ ಇದ್ದರೂ ಹಲವರು ಒಂದಷ್ಟು ಮದ್ಯದ ಬಾಟಲಿಗಳನ್ನು ಹಿಡಿದುಕೊಂಡು ಪರಾರಿಯಾದರು. ಈ ದರೋಡೆಯಲ್ಲಿ ಭಾಗಿಯಾಗಿರುವವರ ಪತ್ತೆಗಾಗಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಈ ಘಟನೆ ವಿಡಿಯೋ ವೈರಲ್‌ ಆಗ್ತಿದೆ.

Ad
Ad
Nk Channel Final 21 09 2023