ಸಾಮಾಜಿಕ ಜಾಲತಾಣದಲ್ಲಿ ದಿಕ್ಕೊಂದು ರೀತಿಯ ಟ್ರೆಂಡಿಗಳು ಹರಿದಾಡುತ್ತಿರುತ್ತವೆ. ಇನ್ನು ಅದನ್ನು ನೋಡಿ ನೆಟ್ಟಿಗರು ಕೂಡ ಸಂತಸ ಪಡುತ್ತಾರೆ. ಕೆಲವರಿಗೆ ಇನ್ಸ್ಟಾಗ್ರಾಮ್ನಲ್ಲಿ ರೀಲ್ಸ್ ಅಥವಾ ಮಿಮ್ಸ್ಗಳ ಮೂಲಕ ಜೀವನ ಸಾಗಿಸುತ್ತಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ “ಚಿನ್ ತಪಕ್ ದಂ ದಂ” ಬಾರಿ ಟ್ರೆಂಡ್ ಸೃಷ್ಟಿಮಾಡಿದೆ.
ಯಾವ ರೀಲ್ಸ್ ನೋಡಿದರೂ, ಹತ್ತರಲ್ಲಿ ಕನಿಷ್ಠ 7-8 ರೀಲ್ಸ್ ನಲ್ಲಿ ಈ ಡೈಲಾಗ್ ಬರುತ್ತದೆ. ಅನೇಕರಿಗೆ ಇದುವರೆಗೆ ಇದು ಡೈಲಾಗ್ ಎಲ್ಲಿಯದು, ಸಿನಿಮಾದ? ಅಥವಾ ಹಾಡಿನದಾ? ಎನ್ನುವುದು ಗೊತ್ತಿಲ್ಲ. ಸಣ್ಣ ವಯಸ್ಸಿನಲ್ಲಿ ನಾವೆಲ್ಲ ನೋಡುತ್ತಿದ್ದ ಜನಪ್ರಿಯ ಕಾರ್ಟೊನ್ ಶೋ ʼಛೋಟಾ ಭೀಮ್ʼ ನಲ್ಲಿ ಬರುವ ಕ್ಯಾರೆಕ್ಟರ್ ವೊಂದರ ಡೈಲಾಗ್ ಇದು. ʼಛೋಟಾ ಭೀಮ್ʼ ನಲ್ಲಿ ಬರುವ ಖಳನಾಯಕ ʼಥಕಿಯಾʼ ಎನ್ನುವಾತ ಮಾಟಮಂತ್ರ ಹಾಗೂ ಮ್ಯಾಜಿಕ್ ಗಳನ್ನು ಮಾಡುವಾಗ ಆತ ಹೇಳುವ ಡೈಲಾಗ್ ʼಚಿನ್ ತಪಕ್ ದಂ ದಂʼ. ಇದು ಆ ಪಾತ್ರದ ಪ್ರಧಾನ ಡೈಲಾಗ್.
ಇತ್ತೀಚೆಗೆ ʼಛೋಟಾ ಭೀಮ್ʼ ಕಾರ್ಯಕ್ರಮ ನೋಡುತ್ತಿದ್ದ ಅಭಿಮಾನಿಯೊಬ್ಬರು ʼಛೋಟಾ ಭೀಮ್ – ಓಲ್ಡ್ ಎನಿಮೀಸ್, ಸೀಸನ್ -4 ನ 47ನೇ ಎಪಿಸೋಡ್ ನೋಡಿದಾಗ, ಥಕಿಯಾ ಪಾತ್ರದ ಈ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ.
ಥಕಿಯಾ ಧೋಲಕ್ಪುರದಲ್ಲಿ ಮಣ್ಣಿನ ಸೈನಿಕರ ಪಡೆಯನ್ನು ನಿರ್ಮಿಸಿ ಅದರ ಮೂಲಕ ದಾಳಿಯನ್ನು ಮಾಡಿಸುತ್ತಾನೆ. ಈ ಸೈನ್ಯ ನಿರ್ಮಾಣ ಹಾಗೂ ಇತರೆ ಮ್ಯಾಜಿಕ್ ಗಳನ್ನು ಮಾಡುವಾಗ ಥಕಿಯಾ ʼಚಿನ್ ತಪಕ್ ದಂ ದಂʼ ಹೇಳುವುದನ್ನು ಈ ಎಪಿಸೋಡ್ ನಲ್ಲಿ ನೋಡಬಹುದು.
ʼಛೋಟಾ ಭೀಮ್ʼ ಒಂದು ಕಾರ್ಟೂನ್ ಶೋ ಆಗಿದ್ದು, 2019ರಲ್ಲಿ ನೆಟ್ ಪ್ಲಿಕ್ಸ್ ನಲ್ಲಿ ಬಂದ ಬಳಿಕ ಈ ಕಾರ್ಯಕ್ರಮ 27 ಮಿಲಿಯನ್ ಗೂ ಹೆಚ್ಚಿನ ವೀಕ್ಷಣೆ ಕಂಡಿದೆ.