Bengaluru 22°C
Ad

ಪತ್ನಿ ಬಿಕಿನಿ ಧರಿಸಿ ಬಿಂದಾಸ್​ ಆಗಿ ಓಡಾಡಲು ಖಾಸಗಿ ದ್ವೀಪ ಖರೀದಿ!

ಪತ್ನಿ ಬಿಕನಿಯಲ್ಲಿ ಬಿಂದಾಸ್​ ಆಗಿ ಓಡಾಡಲಿ, ಸಮುದ್ರದ ತೀರದಲ್ಲಿ ನಲಿದಾಡಲಿ ಅಂತ ಒಂದು ಖಾಸಗಿ ದ್ವೀಪವನ್ನು ದುಬೈನ ಶ್ರೀಮಂತ ಪತಿಯೊಬ್ಬ ಖರೀದಿ ಮಾಡಿದ್ದಾನೆ.

ಪತ್ನಿ ಬಿಕಿನಿಯಲ್ಲಿ ಬಿಂದಾಸ್​ ಆಗಿ ಓಡಾಡಲಿ, ಸಮುದ್ರದ ತೀರದಲ್ಲಿ ನಲಿದಾಡಲಿ ಅಂತ ಒಂದು ಖಾಸಗಿ ದ್ವೀಪವನ್ನು ದುಬೈನ ಶ್ರೀಮಂತ ಪತಿಯೊಬ್ಬ ಖರೀದಿ ಮಾಡಿದ್ದಾನೆ. ಇಂತಹದೊಂದು ಅಪರೂಪದ ಘಟನೆಯನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡು  26 ವರ್ಷದ ಸೌದಿ ಅಲ್ ನಡಕ್ ಹೆಮ್ಮೆ ಪಡುತ್ತಿದ್ದಾರೆ.

ಈ ಮಹಿಳೆ ಕಳೆದ ನಾಲ್ಕು ವರ್ಷದಿಂದ ದುಬೈನಲ್ಲಿದ್ದಾರೆ. ದುಬೈನ ಕೋಟ್ಯಾಧಿಪತಿಗಳಲ್ಲಿ ಒಬ್ಬನಾದ ಜಮಾಲ್ ಅಲ್ ನಡಕ್​ರನ್ನು ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದಾರೆ. ಸೌದಿಗೆ  ಬಿಕನಿ ಧರಿಸಿ ಬೀಚ್​ನಲ್ಲಿ ಬಿಂದಾಸ್​ ಆಗಿ ಓಡಾಡಬೇಕು ಅನ್ನುವ ಆಸೆ ಇತ್ತು. ಆದ್ರೆ ದುಬೈನಲ್ಲಿ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಆಕೆಯ ಪತಿ ಜಮಾಲ್ ಸೌದಿಗಾಗಿ ಒಂದು ಖಾಸಗಿ ದ್ವೀಪವನ್ನೇ ಖರೀದಿಸಿಬಿಟ್ಟಿದ್ದಾರೆ.

418 ಕೋಟಿ ರೂಪಾಯಿ ಕೊಟ್ಟು ಈ ದ್ವೀಪವನ್ನು ಖರೀದಿಸಲಾಗಿದೆ ಈ ವಿಷಯವನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿರದ್ದಾರೆ ಸೌದಿ. ವಿಡಿಯೋದಲ್ಲಿ ಪತಿಯೊಂದಿಗೆ ಪೋಸ್ ಕೊಟ್ಟಿರುವ ಸೌದಿ. ವಿಮಾನದಲ್ಲಿ ಪ್ರಯಾಣ ಮಾಡುತ್ತಾ ಆ ಖಾಸಗಿ ದ್ವೀಪಕ್ಕೆ ಬಂದಿಳಿಯುವ ದೃಶ್ಯಗಳಿವೆ. ಇನ್ನು ವಿಡಿಯೋಗೆ ಕ್ಯಾಪ್ಷನ್ ಕೊಟ್ಟಿರುವ ಸೌದಿ, ನೀವು ಬಿಕನಿ ಧರಿಸಲು ಇಷ್ಟ ಪಟ್ಟಿದ್ದೀರಿ, ನಿಮ್ಮ ಕೋಟ್ಯಾಧೀಶ್ವರ ಪತಿ ನಿಮಗಾಗಿ ಒಂದು ದ್ವೀಪವನ್ನೇ ಖರೀದಿ ಮಾಡಿ ಕೊಟ್ಟಿದ್ದಾರೆ ಎಂದು ಬರೆದುಕೊಂಡಿದ್ದಾರೆ.

 

 

Ad
Ad
Nk Channel Final 21 09 2023