Bengaluru 29°C
Ad

ಬಟ್ಟೆ ಶೋರೂಮ್‌ನಲ್ಲಿ ಮಹಿಳೆ ಮೇಲೆ ಅಮಾನುಷ ಹಲ್ಲೆ; ವಿಡಿಯೋ ವೈರಲ್

New Project (35)

ರಾಜ್‌ಕೋಟ್‌:‌ ಅಮೀನ್ ಮಾರ್ಗ್‌ನಲ್ಲಿರುವ ಬಟ್ಟೆ ಶೋರೂಮ್‌ನಲ್ಲಿ ಮಹಿಳೆಯೊಬ್ಬಳ ಮೇಲೆ ಆಕೆಯ ವ್ಯಾಪಾರ ಪಾಲುದಾರ ಚಿರಾಗ್ ಚಂದ್ರನಾ ಅಮಾನುಷವಾಗಿ ಹಲ್ಲೆ ನಡೆಸಿದ್ದಾನೆ. ಈ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ವ್ಯಕ್ತಿ ಕೇವಲ ಐದು ಸೆಕೆಂಡುಗಳಲ್ಲಿ ಎಂಟು ಬಾರಿ ಕಪಾಳಮೋಕ್ಷ ಮಾಡುವುದನ್ನು ವಿಡಿಯೋ ತೋರಿಸುತ್ತದೆ. ಹಣಕಾಸಿನ ತೊಂದರೆಯಿಂದ ಚಿರಾಗ್‌ ಗೆ ಸಹಾಯ ಮಾಡಲು ಸಹಭಾಗಿತ್ವ ವಹಿಸಿದ್ದ ಮಹಿಳೆ 2 ಲಕ್ಷ ರೂಪಾಯಿ ನೀಡಿದ್ದರು. ಈ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಹಲ್ಲೆ ನಡೆಸಲಾಗಿದೆ. ಆತ ಬೆದರಿಕೆ ಹಾಕಿದ್ದರೂ, ಹಣಕ್ಕಾಗಿ ನಿರಂತರ ಕಿರುಕುಳವನ್ನು ಎದುರಿಸಿದ ನಂತರ ಧೈರ್ಯದಿಂದ ಮಹಿಳೆ ಸೆಪ್ಟೆಂಬರ್ 5 ರಂದು ಮಾಳವೀಯ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023