Ad

ತನಗೆ ಕಚ್ಚಿದ ವಿಷಕಾರಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಕಿದ ಭೂಪ!

ಇತ್ತೀಚಿನ ದಿನಗಳ್ಲಲಿ ವಿಚಿತ್ರಘಟನೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಹಾವೆಂದೆರೆ ಎಂತವರೂ ಹೆದರುತ್ತಾರೆ. ಅದರಲ್ಲೂ ವಿಷಕಾರಿ ಹಾವುಗಳೆಂದೆರೆ ಇನ್ನೂ ಭಯ ಹೆಚ್ಚು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಓರ್ವ ಕೋಪದಲ್ಲಿ ತನಗೆ ಕಚ್ಚಿದ ವಿಷಕಾರಿ ಹಾವಿನ ತಲೆಯನ್ನೆ ಕಚ್ಚಿ ಬಿಸಾಕಿದ್ದಾನೆ.

ಛತ್ತೀಸ್‌ಗಢ: ಇತ್ತೀಚಿನ ದಿನಗಳ್ಲಲಿ ವಿಚಿತ್ರಘಟನೆಗಳು ಹೆಚ್ಚಾಗಿ ಕೇಳಿಬರುತ್ತಿವೆ. ಹಾವೆಂದೆರೆ ಎಂತವರೂ ಹೆದರುತ್ತಾರೆ. ಅದರಲ್ಲೂ ವಿಷಕಾರಿ ಹಾವುಗಳೆಂದೆರೆ ಇನ್ನೂ ಭಯ ಹೆಚ್ಚು. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು ಓರ್ವ ಕೋಪದಲ್ಲಿ ತನಗೆ ಕಚ್ಚಿದ ವಿಷಕಾರಿ ಹಾವಿನ ತಲೆಯನ್ನೆ ಕಚ್ಚಿ ಬಿಸಾಕಿದ್ದಾನೆ.

Ad
300x250 2

ಹೌದು,ರಾತ್ರಿ ಮಲಗಿದ್ದ ವೇಳೆ ಯುವಕನೊಬ್ಬನ ಕೈಗೆ ವಿಷಕಾರಿ ಕಟ್ಟು ಹಾವು ಕಡಿದಿದೆ. ಇದರಿಂದ ಕೋಪಗೊಂಡ ಯುವಕ ನಿದ್ದೆಗಣ್ಣಿನಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ. ಪರಿಣಾಮ ಹಾವು ಸಾವನ್ನಪ್ಪಿದ್ದು, ಹಾವಿನ ಕಡಿತಕ್ಕೊಳಗಾದ ಆ ಯುವಕ ಕೂಡಾ ಸಾವನ್ನಪ್ಪಿದ್ದಾನೆ. ಈ ಘಟನೆ ಛತ್ತೀಸ್‌ಗಢದ ಸೂರಜ್ಪುರ ಜಿಲ್ಲೆಯ ಪ್ರತಾಪುರ್ನಲ್ಲಿ ನಡೆದಿದೆ.

ರೇವತಿ ಚೌಕಿ ಪ್ರದೇಶದ ಬುಡಕಟ್ಟು ನಿವಾಸಿಯಾದ ಕೋಮಾ ನೇತಮ್ ಎಂಬ ಯುವಕ ರಾತ್ರಿ ನೆಮ್ಮದಿಯಿಂದ ಮಲಗಿದ್ದ ವೇಳೆ ಆತನ ಕೈಗೆ ವಿಷಪೂರಿತ ಕಟ್ಟು ಹಾವು ಕಡಿದಿದೆ. ಸರಿಸುಮಾರು ರಾತ್ರಿ 1 ಗಂಟೆಯ ವೇಳೆಗೆ ಆತನಿಗೆ ಹಾವು ಕಡಿದಿದ್ದು, ಇದರಿಂದ ಕೋಪಗೊಂಡ ಆ ಯುವಕ ನಿದ್ದೆಗಣ್ಣಿನಲ್ಲಿ ಹಾವಿನ ತಲೆಯನ್ನೇ ಕಚ್ಚಿ ಬಿಸಾಡಿದ್ದಾನೆ.

Ad
Ad
Nk Channel Final 21 09 2023
Ad