Ad

ಬೆಲ್ಟ್‌ನಿಂದ ಕ್ರೂರವಾಗಿ ಮಕ್ಕಳಿಗೆ ಥಳಿತ : ವಿಡಿಯೋ ವೈರಲ್‌

ಮಹಿಳೆಯೊಬ್ಬಳು ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಹೊಡೆದು ಶಿಕ್ಷಿಸುತ್ತಿರುವ ಘಟನೆ ಗೋರೆಗಾಂವ್ ನ ನಿರ್ಲಾನ್ ಪಾರ್ಸಿ ಪಂಚಾಯತ್ ಕಾಂಪ್ಲೆಕ್ಸ್‌ನ ಕಾಲೋನಿಯಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಮುಂಬೈ: ಮಹಿಳೆಯೊಬ್ಬಳು ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಹೊಡೆದು ಶಿಕ್ಷಿಸುತ್ತಿರುವ ಘಟನೆ ಗೋರೆಗಾಂವ್ ನ ನಿರ್ಲಾನ್ ಪಾರ್ಸಿ ಪಂಚಾಯತ್ ಕಾಂಪ್ಲೆಕ್ಸ್‌ನ ಕಾಲೋನಿಯಲ್ಲಿ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Ad
300x250 2

ವಿಡಿಯೋವೊಂದು ನೋಡಿದ ಬಾಂಬೆ ಹೈಕೋರ್ಟ್‌ ಮಾಜಿ ನ್ಯಾಯಾಧೀಶ ಶಾರುಖ್ ಕಥಾವಾಲಾ ತಾಯಿಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮುಂಬೈ ಪೊಲೀಸರು, ರಾಜ್ಯ ಮಾನವ ಹಕ್ಕುಗಳ ಆಯೋಗ ಮತ್ತು ರಾಜ್ಯ ಮಕ್ಕಳ ಹಕ್ಕುಗಳ ಆಯೋಗವನ್ನು ಒತ್ತಾಯಿಸಿದ್ದಾರೆ.

ವಿಡಿಯೋದಲ್ಲಿ ಮಹಿಳೆ ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುವುದು ಮತ್ತು ಹೆದರಿಸುವುದು ಕಂಡುಬರುತ್ತದೆ. ಮಕ್ಕಳು ಭಯಭೀತರಾಗಿದ್ದು, ತಮ್ಮನ್ನು ಬಿಡುವಂತೆ ಬೇಡಿಕೊಳ್ಳುವುದನ್ನು ಕಾಣಬಹುದು. ಆದರೂ, ತಾಯಿ ಅಸಹಾಯಕ ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುತ್ತಿರುವುದು ಕಾಣಿಸುತ್ತದೆ.

ಈ ವೀಡಿಯೊ ವೈರಲ್ ಆದ ನಂತರ ಆಕ್ರೋಶಕ್ಕೆ ಕಾರಣವಾಗಿದೆ. ಮಕ್ಕಳನ್ನು ಬೆಲ್ಟ್‌ನಿಂದ ಹೊಡೆಯುತ್ತಿರುವ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಅಲ್ಲದೇ ಮಾಜಿ ನ್ಯಾಯಾಧೀಶರು ವಿಡಿಯೊಗಳ ಬಗ್ಗೆ ತಮ್ಮ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಮಕ್ಕಳನ್ನು ರಕ್ಷಿಸುವ ಅಗತ್ಯವಿದೆ ಹಾಗಾಗಿ ಪೊಲೀಸರು ಮತ್ತು ಮಕ್ಕಳ ಹಕ್ಕು ಆಯೋಗ ಮಧ್ಯಪ್ರವೇಶ ಮಾಡುವಂತೆ ಕೋರಿದ್ದಾರೆ.

ಈ ಹಿನ್ನಲೆಯಲ್ಲಿ ಪೊಲೀಸ್ ಆಯುಕ್ತ ವಿವೇಕ್ ಫನ್ಸಾಲ್ಕರ್ ಅವರು ಸಂಬಂಧಪಟ್ಟ ಡಿಸಿಪಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಪೊಲೀಸರು ಕುಟುಂಬಕ್ಕೂ ಭೇಟಿ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

https://x.com/fpjindia/status/1808109828486975781?

Ad
Ad
Nk Channel Final 21 09 2023
Ad