Ad

‘ತಾಲ್ ಸೇ ತಾಲ್’ ಹಾಡಿಗೆ ಈಜುಕೊಳದಲ್ಲಿ ನೃತ್ಯ ಮಾಡಿದ ಅಮೆರಿಕಾದ ಕ್ರೀಡಾಪಟುಗಳು

Usa Artistic

ಎಆರ್‌ ರೆಹಮಾನ್‌ ಎವರ್ಗ್ರೀನ್‌ ಹಾಡುಗಳಲ್ಲಿ ತಾಲ್‌ ಸೆ ತಾಲ್‌ ಮಿಲಾ ಸೇರಿದೆ. ʼತಾಲ್ʼ ಚಿತ್ರದ ಈ ಹಾಡು, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಈಗ ಮತ್ತೆ ಈ ಹಾಡು ಸದ್ದು ಮಾಡುತ್ತಿದೆ.

ಹೌದು. . ವಿಶ್ವ ಅಕ್ವಾಟಿಕ್ಸ್‌ ದೋಹಾ 2024ರಲ್ಲಿ ಯುಎಸ್‌ ಕಲಾತ್ಮಕ ಈಜು ತಂಡ, ಎಆರ್‌ ರೆಹಮಾನ್ ಅವರ ಟೈಮ್‌ಲೆಸ್ ಸಂಯೋಜನೆ ತಾಲ್ ಸೆ ತಾಲ್‌ ಹಾಡನ್ನು ಬಳಸಿಕೊಂಡು ನೃತ್ಯ ಮಾಡಿ ಗಮನ ಸೆಳೆದಿದೆ.

ಈ ಹಾಡಿಗೆ ಈಜುಗಾರರು ಅಧ್ಬುತವಾಗಿ ಡಾನ್ಸ್‌ ಮಾಡಿದ್ದಾರೆ. ಎ. ಆರ್.‌ ರೆಹಮಾನ್‌ ಲೂಪ್ಸ್‌ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈಜುಗಾರರ ಹಾಡಿಗೆ ತಕ್ಕಂತೆ ನೀರಿನಲ್ಲಿ ತಮ್ಮ ನೃತ್ಯ ಕಲೆ ಪ್ರದರ್ಶನ ಮಾಡೋದನ್ನು ನೀವು ನೋಡ್ಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗ್ತಿದೆ.

Ad
Ad
Nk Channel Final 21 09 2023