Ad

ಯದ್ವಾತದ್ವಾ ಕಾರು ಓಡಿಸಿ ಮಹಿಳೆಗೆ ಡಿಕ್ಕಿ ಹೊಡೆದ ಬಾಲಕ: ವಿಡಿಯೋ ವೈರಲ್

Car

ಪುಣೆ: ಬಾಲಕನೋರ್ವ ಯದ್ವಾತದ್ವಾ ಕಾರು ಓಡಿಸಿ ಮಹಿಳೆಗೆ ಡಿಕ್ಕಿ ಹೊಡೆದ ಅಪಘಾತದ ವಿಡಿಯೋವೊಂದು ವೈರಲ್ ಆಗಿದೆ.

Ad
300x250 2

ಪುಣೆಯಲ್ಲಿ ಮೇ 19 ರಂದು ಕಲ್ಯಾಣಿ ನಗರದಲ್ಲಿ 17 ವರ್ಷದ ಬಾಲಕನೊಬ್ಬ ತನ್ನ ಪೋರ್ಷೆ ಸ್ಪೋರ್ಟ್ಸ್ ಕಾರಿನಿಂದ ಇಬ್ಬರಿಗೆ ಡಿಕ್ಕಿ ಹೊಡೆದ ಘಟನೆಯನ್ನು ಜನರು ಮರೆತಿಲ್ಲವಾದರೂ, ಆಳಂಡಿಯಲ್ಲಿ ನಡೆದ ಮತ್ತೊಂದು ಭಯಾನಕ ಘಟನೆ ಎಲ್ಲರನ್ನು ಬೆಚ್ಚಿ ಬೀಳಿಸಿದೆ.

ಈ ಘಟನೆಯಲ್ಲಿ, 17 ವರ್ಷದ ಇನ್ನೊಬ್ಬ ಬಾಲಕ ಯದ್ವಾತದ್ವಾ ಕಾರು ಚಲಾಯಿಸಿ ಮಹಿಳೆಗೆ ಡಿಕ್ಕಿ ಹೊಡೆದಿದ್ದಾನೆ ಮತ್ತು ಘಟನೆಯ ವೀಡಿಯೊ ವೈರಲ್ ಆಗಿದೆ.

Ad
Ad
Nk Channel Final 21 09 2023
Ad