Bengaluru 24°C

ಬಿಯರ್ ಬಾಟಲಿಯಲ್ಲಿ ಸಿಲುಕಿಕೊಂಡ ಹಾವು: ವಿಡಿಯೋ ವೈರಲ್‌

ಜಗಿತ್ಯಾಲ್ ಜಿಲ್ಲೆಯಲ್ಲಿ ಹಾವೊಂದು ಬಿಯರ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಗಿತ್ಯಾಲ್ ನ ನಲ್ಲಗೊಂಡ ಪ್ರದೇಶದಲ್ಲಿರುವ ರೈತರೊಬ್ಬರ ಜಮೀನಿನಲ್ಲಿ ಈ ಘಟನೆ ನಡೆದಿದೆ.

ತೆಲಂಗಾಣ: ಜಗಿತ್ಯಾಲ್ ಜಿಲ್ಲೆಯಲ್ಲಿ ಹಾವೊಂದು ಬಿಯರ್ ಕ್ಯಾನ್‌ನಲ್ಲಿ ಸಿಕ್ಕಿಬಿದ್ದ ಘಟನೆ ನಡೆದಿದೆ. ಜಗಿತ್ಯಾಲ್ ನ ನಲ್ಲಗೊಂಡ ಪ್ರದೇಶದಲ್ಲಿರುವ ರೈತರೊಬ್ಬರ ಜಮೀನಿನಲ್ಲಿ ಈ ಘಟನೆ ನಡೆದಿದೆ.


ಬಿಯರ್ ಕ್ಯಾನ್ ಒಳಗೆ ತಲೆ ಸಿಕ್ಕಿಸಿಕೊಂಡ ಹಾವು, ಸುಮಾರು ಮೂರು ಗಂಟೆಗಳ ಹೋರಾಟದ ನಂತರ, ಮುಳ್ಳಿನ ಪೊದೆಯ ಒಳಗೆ ಹೋಗಿ ಬಿಯರ್ ಕ್ಯಾನ್‌ನಿಂದ ತನ್ನನ್ನು ಬಿಡಿಸಿಕೊಂಡು ನಿಟ್ಟುಸಿರು ಬಿಟ್ಟಿದೆ.


ಈ ಹಿಂದೆ ಇದೇ ರೀತಿಯ ಘಟನೆಯಲ್ಲಿ ಒಡಿಶಾದ ಪುರಿ ಜಿಲ್ಲೆಯಲ್ಲಿ ಮತ್ತೊಂದು ಹಾವು ಖಾಲಿ ಡಬ್ಬದಲ್ಲಿ ಸಿಲುಕಿಕೊಂಡಿತ್ತು. ಸ್ಥಳೀಯರು ಉರಗ ಸಂರಕ್ಷಕರಿಗೆ ಕರೆ ಮಾಡಿ ಮಾಹಿತಿ ನೀಡಿದ ನಂತರ ಹಾವನ್ನು ರಕ್ಷಿಸಲಾಗಿತ್ತು.


https://x.com/ChotaNewsTelugu/status/1824329009246703793?


Nk Channel Final 21 09 2023