Bengaluru 21°C
Ad

ದಾಹ ತೀರಿಸಿಕೊಳ್ಳಲು ಹೋದ 32 ಕೋತಿಗಳು ಬಾವಿಗೆ ಮುಳುಗಿ ಮೃತ್ಯು

ದಾಹ ತೀರಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದ 32 ಕೋತಿಗಳು ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ‍ಪಲಾಮು ಜಿಲ್ಲೆಯಲ್ಲಿ ನಡೆದಿದ್ದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

ಜಾರ್ಖಂಡ್: ದಾಹ ತೀರಿಸಿಕೊಳ್ಳಲು ನೀರು ಕುಡಿಯಲು ಹೋಗಿದ್ದ 32 ಕೋತಿಗಳು ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಾರ್ಖಂಡ್‌ನ ‍ಪಲಾಮು ಜಿಲ್ಲೆಯಲ್ಲಿ ನಡೆದಿದ್ದಾಗಿ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

Ad

ಸೋರಟ್‌ನ ನೀರಾವರಿ ಬಾವಿಯಲ್ಲಿ ಒಟ್ಟು 32 ಮಂಗಗಳ ಶವ ಪತ್ತೆಯಾಗಿದೆ. ಶವಗಳನ್ನು ಹೊರತೆಗೆಯಲಾಗಿದೆ ಎಂದು ಮೇದಿನಿನಗರ ವಿಭಾಗೀಯ ಅರಣ್ಯ ಅಧಿಕಾರಿ ಕುಮಾರ್ ಆಶಿಶ್ ತಿಳಿಸಿದ್ದಾರೆ.

Ad

ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಸಿಗಾಳಿ ಬೀಸುತ್ತಿದ್ದು, ತಾಪಮಾನ 44–45 ಡಿಗ್ರಿ ದಾಖಲಾಗುತ್ತಿದೆ. ಘಟನೆ ನಡೆದ ಪ್ರದೇಶದಲ್ಲಿ ನೀರಿನ ಮೂಲಗಳು ಬಹುತೇಕ ಬತ್ತಿಹೋಗಿವೆ. ದಾಹ ಇಂಗಿಸಿಕೊಳ್ಳಲು ಕಾಡು ಮೃಗಗಳು ನೀರನ್ನು ಅರಸಿ ನಾಡಿಗೆ ಬರುತ್ತಿವೆ. ನೀರು ಕುಡಿಯಲು ಇಳಿದ ವೇಳೆ ಈ ಕೋತಿಗಳು ಮುಳುಗಿರಬಹುದು ಎಂದು ಆಶಿಶ್ ಹೇಳಿದ್ದಾರೆ.

Ad

ಕೋತಿಗಳು ಮೃತಪಟ್ಟ ಬಾವಿಯಲ್ಲಿ ಪುಷ್ಕಳ ನೀರಿತ್ತು. ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿ ಇನ್ನಷ್ಟೇ ಬರಬೇಕಿದೆ ಎಂದು ಅವರು ಹೇಳಿದರು.

Ad

 

Ad
Ad
Nk Channel Final 21 09 2023