Ad

20 ಪ್ರಿಯಕರರಿಂದ 20 ಐಫೋನ್ ಗಿಫ್ಟ್​​​​​; ಫೋನ್​​ ಮಾರಿ ಮನೆ ಖರೀದಿಸಿದ ಯುವತಿ

Iphone

ಚೀನಾ:  ಯುವತಿಯೊಬ್ಬಳು 20 ಪ್ರಿಯಕರರಿಂದ 20 ಐಫೋನ್​​​ ಗಿಫ್ಟ್ ಪಡೆದು ಬಳಿಕ ಎಲ್ಲ ಫೋನ್​​ ಮಾರಿ ಹೊಸ ಮನೆ ಖರೀದಿಸಿ ಸುದ್ದಿಯಾಗಿದ್ದಾಳೆ. ಹೌದು. . ಈ ಘಟನೆ ಚೀನಾದಲ್ಲಿ ನಡೆದಿದೆ.

Ad
300x250 2

ಚೀನಾದ ಮೂಲದ ಈ ಯುವತಿಯ ಹೆಸರು Xiaoli. ಸದ್ಯ ಈಕೆಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪೋಸ್ಟ್​​ಗಳು ಹರಿದಾಡುತ್ತಿದೆ. ವಾಸ್ತವವಾಗಿ ಈ ಘಟನೆ 2016ರಲ್ಲಿ ನಡೆದಿದೆ. @tech_grammm ಎಂಬ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಈಕೆಯ ಕುರಿತು ಹಾಕಲಾದ ಫೋಸ್ಟ್​ ಒಂದು ಸದ್ಯ ಎಲ್ಲೆಡೆ ವೈರಲ್​​ ಆಗಿದೆ.

ಬಡ ಕುಟುಂಬದಿಂದ ಬಂದ ಈಕೆ ಸ್ವಂತ ಮನೆ ಖರೀದಿಸಲು ಈ ರೀತಿ ಪ್ಲ್ಯಾನ್​ ಮಾಡಿದ್ದಾಳೆ ಎಂದು ತಿಳಿದುಬಂದಿದೆ. ತನ್ನ ಎಲ್ಲ ಐಫೋನ್​​ಗಳನ್ನು ಭಾರತದ ಕರೆನ್ಸಿಯ ಅಂದಾಜಿನ ಪ್ರಕಾರ 14 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಿ ಡೌನ್​​ ಪೇಮೆಂಟ್​​ನಲ್ಲಿ ಹೊಸ ಮನೆ ಖರೀದಿಸಿದ್ದಾಳೆ ಎಂದು ತಿಳಿದು ಬಂದಿದೆ.

Ad
Ad
Nk Channel Final 21 09 2023
Ad