ಆ್ಯಪಲ್ ಕಂಪನಿಗೆ ಮತ್ತೊಂದು ಹೊಡೆತ: ‘ಐಫೋನ್ 12’ ಮಾರಾಟ ನಿಷೇಧ

ಫ್ರಾನ್ಸ್ ಸರ್ಕಾರ ರೆಡಿಯೇಶನ್ ಲೆವಲ್ ಮಿತಿಗಿಂತ ಹೆಚ್ಚಿರುವ ಕಾರಣ ಫ್ರಾನ್ಸ್‌ನಲ್ಲಿ ಐಫೋನ್ 12 ಮಾರಾಟ ನಿಷೇಧಿಸಿದೆ. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಆ್ಯಪಲ್ ಕಂಪನಿ, ಮಾರಾಟವಾಗಿರುವ, ಡೀಲರ್‌ಬಳಿ ಇರುವ ಐಫೋನ್ 12 ಹಿಂಪಡೆದು ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲು ನಿರ್ಧರಿಸಿದೆ.

ಮೊಬೈಲ್ ಫೋನ್ ಸೇರಿದಂತೆ ಯಾವುದೇ ಗ್ಯಾಜೆಟ್ ರೇಡಿಯೇಶನ್ ಲೆವಲ್ ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿದರೆ ಅಪಾಯ ಹೆಚ್ಚು. ಇದು ಗಂಭೀರ ಸಮಸ್ಯೆ ತಂದೊಡ್ಡಲಿದೆ. SAR(ಸ್ಪೆಸಿಫಿಕ್ ಅಬ್ಸಾರ್ಪಶನ್ ರೇಟ್) ಪ್ರಕಾರ ಪ್ರತಿ ಸ್ಮಾರ್ಟ್‌ಫೋನ್ ರೇಡಿಯೇಶನ್ ರೇಟ್ ಪ್ರತಿ ಕಿಲೋಗ್ರಾಂನಲ್ಲಿ 2 ವ್ಯಾಟ್ಸ್ ಮೀರಬಾರದು.

ಆದರೆ ಫ್ರಾನ್ಸ್‌ನಲ್ಲಿ ಮಾರಾಟವಾಗಿರುವ ಐಫೋನ್ 12 ರೇಡಿಯೆಯನ್ ಲೆವಲ್ ಈ ಮಿತಿಯನ್ನು ಮೀರಿದೆ. ಹೀಗಾಗಿ ಫ್ರಾನ್ಸ್ ಸರ್ಕಾರ ಐಫೋನ್ 12 ಮಾರಾಟ ನಿಷೇಧಿಸಿದೆ.

ಫ್ರಾನ್ಸ್ ಐಫೋನ್ 12 ನಿಷೇಧಿಸಿದ ಬಳಿಕ ಆ್ಯಪಲ್ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಈ ವಾರದಲ್ಲಿ ಆ್ಯಪಲ್ ತನ್ನ ಐಫೋನ್ 12 ಹಿಂಪಡೆಯುವ ಕುರಿತು ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ. ಇದಕ್ಕಾಗಿ ಆಗಿರುವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ.

ಇತ್ತ ಆ್ಯಪಲ್​ ಐಫೋನ್​ 15 ​​ ಟೆಕ್​ಸ್ಟೆಡ್​​ ಮ್ಯಾಟ್​​ ಫಿನಿಶ್​​ ಮತ್ತು ಅಲ್ಯುಮಿನಿಯಂ ಫ್ರೇಮ್​ನೊಂದಿಗೆ ಪರಿಚಯಿಸಿದೆ. ಇದರಲ್ಲಿ ಡೈನಾಮಿಕ್​​ ಐಲ್ಯಾಂಡ್​​ ಮತ್ತು ಅಲ್ಟ್ರಾ ಹೈ-ರೆಸಲ್ಯೂಶನ್​​ ಫೋಟೋಗಳಿಗಾಗಿ 48 ಮೆಗಾಫಿಕ್ಸೆಲ್​​ ಮುಖ್ಯ ಕ್ಯಾಮೆರಾ, ಆಪ್ಟಿಕಲ್​ ಜ್ಯೂಮ್​ಗಾಗಿ ಹೊಸ 2ಎಕ್ಸ್​ ಟೆಲಿಫೋಟೋ ಕ್ಯಾಮರಾ ಒಳಗೊಂಡಿದೆ.

Ashitha S

Recent Posts

ಆಧಾರ್‌ ದುರುಪಯೋಗ: ಕರ್ನಾಟಕದಿಂದ 2.95 ಲಕ್ಷ ದೂರು ದಾಖಲು

ಜನರು ದಾಖಲೆ ದುರುಪಯೋಗ ಪಡಿಸಿಕೊಂಡಿರುವ ಸೈಬರ್ ವಂಚಕರು, ಒಂದೇ ಸಂಖ್ಯೆ ಸಿಮ್‌ಗಳನ್ನು ಖರೀದಿಸಿರುವ ಸಂಬಂಧ ಟೆಲಿಕಾಂ ಅನಾಲಿಟಿಕಲ್‌ ಫಾರ್ ಫ್ರಾಡ್‌…

6 mins ago

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ: ಆರೆಂಜ್, ಯೆಲ್ಲೋ ಅಲರ್ಟ್‌ ಘೋಷಣೆ

ರಾಜ್ಯಾದ್ಯಂತ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಪ್ರತ್ಯೇಕ ಕಡೆಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಗುಡುಗು ಸಹಿತ ಮಿಂಚು ಮತ್ತು…

23 mins ago

ಆರೋಗ್ಯದ ವೃದ್ಧಿಗೆ ಕಾಮಕಸ್ತೂರಿ ಬೀಜದ ಪಾನಕ

ಮನುಷ್ಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ ಅದೇ ರೀತಿ ಖಾಲಿ ಹೊಟ್ಟೆಯಲ್ಲಿ ಕಾಮಕಸ್ತೂರಿ ಬೀಜಗಳನ್ನು ಕುಡಿಯುವುದು ಬಹಳಷ್ಟು…

32 mins ago

ಇವತ್ತಿನ ಚಿನ್ನ, ಬೆಳ್ಳಿ ದರಪಟ್ಟಿ ಹೀಗಿದೆ!

ಚಿನ್ನ ಮತ್ತು ಬೆಳ್ಳಿ ಬೆಲೆ ಈ ವಾರವೂ ಏರಿಳಿತಗಳನ್ನು ಕಂಡಿದ್ದು, ಬೆಳ್ಳಿ ಬೆಲೆ ಕಳೆದ 10 ದಿನದಲ್ಲಿ ಗ್ರಾಮ್​ಗೆ 4…

51 mins ago

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಗೆದ್ದು ಬೀಗಿದ ಆರ್​​​ಸಿಬಿ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್​ ಪಂದ್ಯದಲ್ಲಿ ವಿರಾಟ್…

1 hour ago

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

9 hours ago